LATEST NEWS
ಶಬರಿಮಲೆ ಸನ್ನಿಧಾನದ ಸಮೀಪ ಕಾಣಿಸಿಕೊಂಡ ಕಾಳಿಂಗ ಸರ್ಪ
ಶಬರಿಮಲೆ ಜನವರಿ 13: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಾಂಗಣದಲ್ಲಿ ಭಾನುವಾರ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಅರಣ್ಯ ಸಿಬ್ಬಂದಿ ಅದನ್ನು ರಕ್ಷಿಸಿದ್ದಾರೆ. ಬೆಳಗ್ಗೆ ಸನ್ನಿಧಾನದ ಒಳಗಿನ ಭಸ್ಮಾಕುಳಂನಲ್ಲಿ ಕಾಳಿಂಗ ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತ ಅರಣ್ಯ ಸಿಬ್ಬಂದಿ, ನುರಿತ ಉರಗ ರಕ್ಷಕರಿಂದ ಕಾಳಿಂಗ ಸರ್ಪವನ್ನು ರಕ್ಷಿಸಿದ್ದಾರೆ. ಬಳಿಕ ಸುರಕ್ಷಿತವಾಗಿ ದಟ್ಟಾರಣ್ಯದಲ್ಲಿ ಬಿಟ್ಟು ಬಂದಿದ್ದಾರೆ.
ದೇವಾಲಯದ ಆವರಣದಲ್ಲಿ ಹಾವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಈ ಪ್ರದೇಶದಲ್ಲಿ ಕಣ್ಗಾವಲು ತೀವ್ರಗೊಳಿಸಲಾಗಿದೆ. ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಪಂಪಾ ಬೇಸ್ ಕ್ಯಾಂಪ್ ನ ದಟ್ಟಾರಣ್ಯದಲ್ಲಿ ಬಿಡಲಾಗಿದೆ. ಜನವರಿ 14 ರಂದು ನಡೆಯುವ ಮಕರವಿಳಕ್ಕು ಉತ್ಸವದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸನ್ನಿಧಾನಂ ಮತ್ತು ಅದರ ಆವರಣದಲ್ಲಿ ತನ್ನ ಕಣ್ಗಾವಲು ತೀವ್ರಗೊಳಿಸಿದೆ.
ನವೆಂಬರ್ 15, 2024 ರಿಂದ ನಡೆಯುತ್ತಿರುವ ಶಬರಿಮಲೆ ಯಾತ್ರೆ ಅವಧಿಯಲ್ಲಿ ಇಲ್ಲಿಯವರೆಗೆ 243ಕ್ಕೂ ಅಧಿಕ ಹಾವುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.