FILM
ಚೈತ್ರಾ ವಿರುದ್ದ ಸಂಯಮ ಕಳೆದುಕೊಂಡ ಸುದೀಪ್…ದೃತಿಗೆಡದೆ ನಿಂತ ಹಿಂದೂ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ
ಬೆಂಗಳೂರು ನವೆಂಬರ್ 17: ಬಿಗ್ ಬಾಸ್ ಸೀಸನ್ ನಲ್ಲಿ ಮೊದಲ ಬಾರಿ ಕಿಚ್ಚ ಸುದೀಪ್ ತಮ್ಮ ಸಂಯಮ ಕಳೆದುಕೊಂಡು ಸಿಟ್ಚಿಗೆದ್ದಿದ್ದಾರೆ. ಯಾವಾಗಲೂ ಶಾಂತ ಚಿತ್ತತೆಯಿಂದ ಬಿಗ್ ಬಾಸ್ ನಡೆಸಿಕೊಡುತ್ತಿದ್ದ ಸುದೀಪ್ ಮೊದಲ ಬಾರಿಗೆ ಸಿಟ್ಟಾಗಿದ್ದು, ಇಡೀ ಮನೆಯನ್ನೇ ಅಲುಗಾಡಿಸಿದೆ. ಚೈತ್ರಾ ಕುಂದಾಪುರ ವಿರುದ್ದ ಗರಂ ಆದ ಕಿಚ್ಚ ಸುದೀಪ್ ಆಕ್ರೋಶ ಸ್ವಲ್ಪ ಜೋರಾಗಿಯೇ ಇತ್ತು. ಆದರೆ ಕಿಚ್ಚ ಸುದೀಪ್ ಅವರ ಆಕ್ರೋಶದ ಮಾತುಗಳಿಗೆ ಸ್ವಲ್ಪವೂ ಅಂಜದ ಚೈತ್ರಾ ತಾನು ಹೇಳಬೇಕೆಂದುಕೊಂಡಿರುವುದನ್ನು ಹೇಳುವ ಮೂಲಕ ತಾನು ಫೈರ್ ಬ್ರ್ಯಾಂಡ್ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಮನೆಯಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಚೈತ್ರಾ ಕುಂದಾಪುರ ಆಸ್ಪತ್ರೆಯಲ್ಲಿ ತಾವು ವೈದ್ಯರ ಜೊತೆ ನಡೆಸಿದ ಸಂಭಾಷಣೆ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದರು. ಇದು ಬಿಗ್ ಬಾಸ್ ನಿಯಮ ಮರಿದ ಕಾರಣ ಕಿಚ್ಚ ಸುದೀಪ್ ಅವರು ಚೈತ್ರಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಚೈತ್ರಾ ತನ್ನ ಸಮರ್ಥನೆಗೆ ಮುಂದಾದಾಗ ಒಂದು ಹಂತದಲ್ಲಿ ಸುದೀಪ್ ಅವರು ಸಂಯಮ ಕಳೆದುಕೊಂಡಿದ್ದರು, ಸುದೀಪ್ ಅವರ ಮಾತಿಗೆ ಇಡೀದ ಬಿಗ್ ಬಾಸ್ ಮನೆ ಅಲುಗಾಡಿತ್ತು. ಆದರೆ ಚೈತ್ರಾ ಮಾತ್ರ ತನ್ನ ಸಮರ್ಥನೆಗೆ ಅವಕಾಶ ಕೇಳುತ್ತಲೇ ಇದ್ದರು. ಇದೇ ಜಾಗದಲ್ಲಿ ಮನೆಯ ಬೇರೆ ಯಾರೇ ಸದಸ್ಯರಾಗಿದ್ದರು, ಕಣ್ಣೀರಿಟ್ಟು ಸೈಲೆಂಟ್ ಆಗುತ್ತಿದ್ದರು, ಆದರೆ ಹಿಂದೂ ಫೈರ್ ಬ್ರ್ಯಾಂಡ್ ಮಾತ್ರ ಸುದೀಪ್ ಆರ್ಭಟಕ್ಕೆ ಜಗ್ಗದೆ ತನ್ನ ಹೇಳಿಕೆ ಸಮರ್ಥನೆ ಮಾಡಿಕೊಂಡರು. ಕನ್ನಡದ ಬಿಗ್ ಬಾಸ್ ಸೀಸನ್ ನಲ್ಲಿ ಯಾವುದೇ ಮಹಿಳಾ ಸ್ಪರ್ಧಿ ಸುದೀಪ್ ಎದುರು ನಿರರ್ಗಳವಾಗಿ ಸಮರ್ಥನೆ ಮಾಡಿಕೊಂಡಿರುವ ಸಾದ್ಯತೆ ಇಲ್ಲ. ಕೊನೆಗೆ ಸುದೀಪ್ ಅವರು ತಮ್ಮ ವರ್ತನೆ ಬಗ್ಗೆ ಚೈತ್ರಾ ಅವರ ಬಳಿ ಕ್ಷಮೆ ಕೇಳಿದರು.
ಒಟ್ಟಾರೆ ಇಡೀ ಎಪಿಸೋಡ್ ನಲ್ಲಿ ಸುದೀಪ್ ಎದುರು ಚೈತ್ರಾ ತನ್ನ ಸಮರ್ಥನೆಗೆ ಯಾವುದೇ ಹೆದರಿಕೆ ಇಲ್ಲದೆ ನಿಂತಿದ್ದರು. ಹಿಂದೂ ಸಂಘಟನೆಗಳಲ್ಲಿದ್ದ ಚೈತ್ರಾ ಕುಂದಾಪುರ ಎಷ್ಟೇ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು, ಯಾರಿಗೂ ಜಗ್ಗದೆ ಮಾತನಾಡುವ ಚೈತ್ರಾ ಅವರ ಧೈರ್ಯ ಬಿಗ್ ಬಾಸ್ ನಲ್ಲಿದ್ದವರಿಗೆ ಶಾಕ್ ನೀಡಿದೆ.
ಯಪ್ಪ ಆ Voice ಅಲ್ಲಿ
ಕೂಗುದ್ರೆ ಹೆಂಗೆ
ಇನ್ಮೇಲೆ ಆ ಯಮ್ಮ ಇನ್ನೊಂದು ಸಾರ್ಥಿ ಕೈ ಎತ್ತೊದಕ್ಕು 10 ಸಾರ್ಥಿ ಯೋಚ್ನೆ ಮಾಡ್ಬೇಕು.#Kannada #Kichcha #KichchaSudeep #DBoss #BBK11 #BBK #BiggBossSeason11pic.twitter.com/Rk0pb7bZnI— Abhay Suryaa (@AbhaySuryaa_) November 17, 2024
1 Comment