Connect with us

    FILM

    ಅನೂಪ್‌– ಸುದೀಪ್‌ ಜೋಡಿಯ ಹೊಸ ಸಿನಿಮಾ ಟೈಟಲ್‌ ಏನು ಗೊತ್ತಾ?

    ಬೆಂಗಳೂರು: ‘ಫ್ಯಾಂಟಮ್’ ಚಿತ್ರದ ನಂತರ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್‌ ಕಾಂಬಿನೇಷನ್‌ನಡಿ ಮೂಡಿ ಬರಲಿರುವ ಮತ್ತೊಂದು ಬಹುನಿರೀಕ್ಷೆಯ ಚಿತ್ರದ ಟೈಟಲ್‌ ಹೊರಬಿದ್ದಿದೆ. ಫ್ಯಾಂಟಮ್‌ ನಂತರ ಅನೂಪ್‌ ‘ಅಶ್ವತ್ಥಾಮ’ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರ “ಕಿಚ್ಚ ಕ್ರಿಯೇಷನ್ಸ್” ಸಂಸ್ಥೆಯಡಿ ನಿರ್ಮಾಣವಾಗಲಿದೆ.

    ಫ್ಯಾಂಟಮ್‌ ಚಿತ್ರ ಪೂರ್ಣಗೊಂಡ ನಂತರ ಹಳೆ ಪ್ರಾಜೆಕ್ಟ್‌ ‘ಬಿಲ್ಲಾ ರಂಗ ಭಾಷಾ’ ಚಿತ್ರವನ್ನು ಈ ಜೋಡಿ ಕೈಗೆತ್ತಿಕೊಳ್ಳಲಿದೆ ಎಂದು ಸಿನಿಪ್ರಿಯರು ನಿರೀಕ್ಷೆ ಮಾಡಿದ್ದರು. ಸಿನಿಪ್ರಿಯರು ಮತ್ತು ಕಿಚ್ಚನ ಅಭಿಮಾನಿಗಳಿಗೆ ಸಪ್ರೈಜ್‌ ಕೊಡುವಂತೆ ಹೊಸ ಸಿನಿಮಾದ ಟೈಟಲ್‌ ಘೋಷಣೆಯಾಗಿದೆ.

    ಚಿತ್ರದ ಮೊದಲ ನೋಟದ ಪೋಸ್ಟರ್‌ ಕೂಡ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ಟ್ರೆಂಡಿಂಗ್‌ನಲ್ಲಿದೆ. ಪೋಸ್ಟರ್‌ನಲ್ಲಿರುವ

    ಹೆಸರು: ಅಶ್ವತ್ಥಾಮ

    ತಂದೆಯ ಹೆಸರು: ದ್ರೋಣಾಚಾರ್ಯ

    ವಯಸ್ಸು: 5200 ವರ್ಷ

    ಮಿಷನ್‌: ಲೋಡಿಂಗ್‌….

    ಈ ಅಡಿ ಟಿಪ್ಪಣಿಯೂ ಗಮನ ಸೆಳೆಯುವಂತಿದೆ. ಈ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ವಿವರವನ್ನು ಚಿತ್ರತಂಡ ಇನ್ನಷ್ಟೇ ಹಂಚಿಕೊಳ್ಳಬೇಕಿದೆ. ಕಿಚ್ಚನ ಬ್ಯಾನರ್‌ನಡಿ ನಿರ್ಮಾಣವಾಗಲಿರುವ ಈ ಚಿತ್ರ ಕೂಡ ಬಿಗ್‌ ಬಜೆಟ್‌ ಸಿನಿಮಾ ಆಗಲಿದ್ದು, ‘ಅಶ್ವತ್ಥಾಮ’ನಾಗಿ ಸುದೀಪ್‌ ಅವರನ್ನೇ ನೋಡಬಹುದೆನ್ನುವ ಲೆಕ್ಕಾಚಾರದಲ್ಲಿ ಸಿನಿಪ್ರಿಯರಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply