Connect with us

    LATEST NEWS

    ಕೇರಳ ಸರಕಾರಿ ನೌಕರರ ಒಂದು ತಿಂಗಳ ಸ್ಯಾಲರಿ ಕಟ್

    ಕೇರಳ ಸರಕಾರಿ ನೌಕರರ ಒಂದು ತಿಂಗಳ ಸ್ಯಾಲರಿ ಕಟ್

    ಕೇರಳ ಎಪ್ರಿಲ್ 22: ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೇರಳ ಸರಕಾರ ತನ್ನ ನೌಕರರ ಒಂದು ತಿಂಗಳ ಸಂಬಳ ಕಟ್ ಮಾಡಲು ನಿರ್ಧರಿಸಿದೆ. ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕೇರಳದಲ್ಲಿ ಅತಿ ಹೆಚ್ಚು ದಾಖಲಾಗಿದ್ದವು, ಈ ಹಿನ್ನಲೆ ರಾಜ್ಯ ಸರಕಾರವು ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಿಸಿ ಕೊರೊನಾ ಹತೋಟಿಗೆ ತರಲು ಪ್ರಯತ್ನಿಸಿದೆ.

    ಆದರೆ ಕೊರೊನಾ ಲಾಕ್ ಡೌನ್ ನಿಂದ ಉದ್ಯಮಗಳೆಲ್ಲವೂ ನೆಲಕಚ್ಚಿದ್ದು, ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿರುವ ಕೇರಳಕ್ಕೆ ಕೊರೊನಾ ಭಾರಿ ಹೊಡೆತವನ್ನೆ ನೀಡಿದೆ. ಹೀಗಾಗಿ, ಅಲ್ಲಿನ ಸರಕಾರಿ ಉದ್ಯೋಗಿಗಳು ಹಾಗೂ ಜನಪ್ರತಿನಿಧಿಗಳ ವೇತನದಲ್ಲಿ ಕಡಿತ ಮಾಡಲು ಅಲ್ಲಿನ ರಾಜ್ಯ ಸರಕಾರ ನಿರ್ಧರಿಸಿದೆ.

    ಇಂದು ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ಶಿಫಾರಸು ಮಾಡಲಾಗಿದೆ. ಕೇರಳ ಸರಕಾರವು ಸರ್ಕಾರಿ ಉದ್ಯೋಗಿಗಳ ಒಂದು ತಿಂಗಳ ವೇತನವನ್ನು 5 ಕಂತುಗಳಲ್ಲಿ ಕಡಿತಗೊಳಿಸಲು ನಿರ್ಧರಿಸಿದೆ. ಇದಲ್ಲದೆ, ರಾಜ್ಯ ಶಾಸಕರು ಮತ್ತು ಸಚಿವರ ವೇತನದಲ್ಲಿ ವಾರ್ಷಿಕ ಶೇ.30ರಷ್ಟು ವೇತನವನ್ನು ಕಡಿತ ಮಾಡಲಿದೆ. ಸರಕಾರಿ ನೌಕರರ ತಿಂಗಳ ವೇತನದಲ್ಲಿ 6 ದಿಗಳ ವೇತನ ಕಡಿತಗೊಳ್ಳಲಿದೆ. 5 ತಿಂಗಳ ಕಾಲ ಹೀಗೆಯೇ ವೇತನ ಕಡಿತವಾಗಲಿದೆ. ಕಡಿತಗೊಳಿಸಿದ ಒಂದು ತಿಂಗಳ ಸಂಬಳವನ್ನು ನಿರ್ದಿಷ್ಟ ಅವಧಿಯ ನಂತರ ಅವರಿಗೆ ಮರುಪಾವತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದ್ದು, ಎಲ್ಲಾ ವಿಭಾಗದ ಸರ್ಕಾರಿ ನೌಕರರ ಆರು ದಿನಗಳ ವೇತನವನ್ನು ಐದು ತಿಂಗಳಲ್ಲಿ ಕಡಿತಗೊಳಿಸುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಸಲ್ಲಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply