LATEST NEWS
ಕೇರಳ -ಮತ್ತೊಂದು ನಿಫಾ ವೈರಸ್ ಪ್ರಕರಣ – ಸೊಂಕಿತರ ಸಂಖ್ಯೆ 6ಕ್ಕೆ ಏರಿಕೆ
ಕೋಯಿಕ್ಕೋಡ್ ಸೆಪ್ಟೆಂಬರ್ 15: ನಿಫಾ ವೈರಸ್ ಪ್ರಕರಣದಲ್ಲಿ ಕೇರಳದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದೀಗ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ನಿಫಾ ವೈರಸ್ ಸೊಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಸೋಂಕಿಗೆ ಒಳಗಾಗಿರುವ 39 ವರ್ಷದ ವ್ಯಕ್ತಿ ಕೋಯಿಕ್ಕೋಡ್ನ ಆಸ್ಪತ್ರೆಯ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಸಚಿವರ ಕಚೇರಿ ಮಾಹಿತಿ ನೀಡಿದೆ. ಈಗಾಗಲೇ ನಿಫಾ ವೈರಸ್ಗೆ ಇಬ್ಬರು ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರಲ್ಲಿ 9 ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಈ ವಾರದ ಆರಂಭದಲ್ಲಿ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇದು ಬಾಂಗ್ಲಾದೇಶದ ರೂಪಾಂತರಿಯಾಗಿದ್ದು, ಸೋಂಕು ತಗುಲುವ ವೇಗ ಕಡಿಮೆ ಇರುತ್ತದೆ, ಹಾಗೆಯೇ ಸಾವಿನ ಪ್ರಮಾಣ ಹೆಚ್ಚಾಗಿರುತ್ತದೆ. ಕೋಯಿಕ್ಕೋಡ್ನಲ್ಲಿ ಸೋಂಕು ಹರಡಿದ ಕಾರಣ, ಜಿಲ್ಲೆಯ ಸುಮಾರು 11 ವಾರ್ಡ್ಗಳನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಜಿಲ್ಲಾಡಳಿತ ಶನಿವಾರ ಸೆಪ್ಟೆಂಬರ್ 16ರವರೆಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ.