LATEST NEWS
ವೇದಿಕೆಯಿಂದ ಕೆಳಗೆ ಬಿದ್ದ ಕಾಂಗ್ರೇಸ್ ಶಾಸಕಿ ಸ್ಥಿತಿ ಗಂಭೀರ
ಕೇರಳ ಡಿಸೆಂಬರ್ 30: ಕಾರ್ಯಕ್ರಮದ ವೇದಿಕೆಯಿಂದ ಕೆಳಗೆ ಬಿದ್ದು ಕಾಂಗ್ರೇಸ್ ಶಾಸಕಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕೇರಳದ ಕೊಚ್ಚಿ ಜವಾಹರ್ಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದಿದೆ.
ಕಾಂಗ್ರೇಸ್ ಶಾಸಕಿ ಉಮಾಥಾಮಸ್ ಅವರು ಗಂಭೀರ ಸ್ಥಿತಿಯಲ್ಲಿದ್ದು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಚ್ಚಿಯಲ್ಲಿರುವ ಜವಾಹರ್ಲಾಲ್ ನೆಹರು ಸ್ಟೇಡಿಯಂನಿಂದ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಉಮಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು, ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ವೇದಿಕೆಯಿಂದ 15 ಅಡಿ ಕೆಳಗೆ ಬಿದ್ದಿದ್ದಾರೆ.
ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನಡೆಯುತ್ತಿತ್ತು. ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಅವರನ್ನು ಸ್ವಾಗತಿಸಿದ ನಂತರ, ಶಾಸಕಿ ಥಾಮಸ್ ವಿಐಪಿ ಪೆವಿಲಿಯನ್‌ನಲ್ಲಿ ತಮ್ಮ ಆಸನದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸ್ಥಳದಲ್ಲಿದ್ದ ವೈದ್ಯಕೀಯ ತಂಡ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ ಅವರ ಸ್ಥಿತಿ ಚಿಂತಾಜನಕವಾಗಿದೆ. ಉಮಾ ತಲೆಗೆ ಗಾಯವಾಗಿದ್ದು, ಹಲವು ಕಡೆ ಮೂಳೆ ಮುರಿತಗಳಾಗಿವೆ. ಮುಂದಿನ 24 ಗಂಟೆಗಳ ಕಾಲ ಅವರನ್ನು ನಿಗಾ ಇಡಬೇಕಾಗಿದೆ. ನಾವು ಎಲ್ಲಾ ವೈದ್ಯಕೀಯ ನೆರವು ನೀಡುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕ ವಿಡಿ ಸತೀಶನ್ ತಿಳಿಸಿದ್ದಾರೆ.