Connect with us

LATEST NEWS

ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆದ ಕೇರಳ ದಂಪತಿಗಳ ಈ ಪೋಟೋ ಶೂಟ್…!!

ಕೇರಳ ಡಿಸೆಂಬರ್ 20: ಕೇರಳ ದಂಪತಿಗಳ ಪೋಟೋ ಶೂಟ್ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮಲೆಯಾಳಂ ಚಲನಚಿತ್ರರಂಗದ ಎವರ್ ಗ್ರೀನ್ ಹಿಟ್ ಚಿತ್ರ ವೈಶಾಲಿಯ ಪಾತ್ರದ ಪ್ರೇರಣೆಯಿಂದ ಮಾಡಿರುವ ಈ ಪೋಟೋ ಶೂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದೆ.


ಪೋಟೋಗ್ರಾಫರ್ ಮಿಧುನ್ ಸರ್ಕಾರ್ ಅವರು ತೆಗೆದಿರುವ ಈ ಪೋಟೋಗಳಲ್ಲಿ ನಿಜ ಜೀವನದ ದಂಪತಿಗಳಾಗಿರುವ ಅಭಿಜಿತ್ ಜೀತು ಹಾಗೂ ಮಾಕು ಮಾಯ ಅವರು ವೈಶಾಲಿ ಚಿತ್ರದ ಪಾತ್ರಗಳಾಗಿ ಮಿಂಚಿದ್ದಾರೆ.

ಮಲೆಯಾಳಂ ಚಿತ್ರರಂಗದ ಎವರ್ ಗ್ರೀನ್ ಹಿಟ್ ಚಿತ್ರ ಭರತನ್ ನಿರ್ದೇಶನ ಮಾಡಿರುವ ವೈಶಾಲಿ ಚಿತ್ರದಲ್ಲಿ ಬರುವ ರಿಷ್ಯಶೃಂಗನ್ ಹಾಗೂ ವೈಶಾಲಿ ಪಾತ್ರಗಳನ್ನು ಈ ಇಬ್ಬರು ದಂಪತಿಗಳು ಹಾಗೆಯೇ ರಿಕ್ರಿಯೆಟ್ ಮಾಡಿದ್ದಾರೆ.


1988ರಲ್ಲಿ ಬಿಡುಗಡೆಯಾಗಿರುವ ಮಲೆಯಾಳಂ ವೈಶಾಲಿ ಚಲನಚಿತ್ರ , ಮಲೆಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿ ದೊಡ್ಡ ಸಕ್ಸಸ್ ಹೊಂದಿದ ಚಿತ್ರವಾಗಿ ದಾಖಲೆ ಬರೆದಿದೆ. ಈ ಚಿತ್ರದಲ್ಲಿ ಸಂಜಯ್ ಹಾಗೂ ಸುಪರ್ಣ ಅಭಿನಯಿಸಿದ್ದಾರೆ. ಈಗಲೂ ಈ ಚಿತ್ರ ಮಲೆಯಾಳಂ ಚಲನಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.


ಪೋಟೋಗ್ರಾಫಿಯಲ್ಲಿ ಕೇರಳ ಇಡೀ ದೇಶಕ್ಕೆ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದೆ. ಮದುವೆಯ ಪೋಟೋ ಶೂಟ್ ಗಳಲ್ಲಿ ಅತೀ ಹೆಚ್ಚು ಕ್ರಿಯೆಟಿವಿಟಿಯನ್ನು ಕೇರಳದ ಛಾಯಾಗ್ರಾಹಕರು ತೋರಿಸುತ್ತಿದ್ದು, ಇಡೀ ದೇಶದಲ್ಲಿ ತನ್ನ ಛಾಪನ್ನು ಮೂಡಿಸುತ್ತಿದ್ದಾರೆ.