Connect with us

LATEST NEWS

ಬೋರ್ ವೆಲ್ ಲಾರಿಗೆ ಬೈಕ್ ಡಿಕ್ಕಿ ಸವಾರ ಸ್ಥಳದಲ್ಲೇ ಸಾವು

ಮೂಡುಬಿದಿರೆ: ಬೋರ್ ವೆಲ್ ಲಾರಿಗೆ ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡುಬಿದಿರೆ ಸಮೀಪದ ತೆಂಕಮಿಜಾರಿನಲ್ಲಿ ನಡೆದಿದೆ. ಮೃತಪಟ್ಟ ಬೈಕ್ ಸವಾರನನ್ನು ಮುಚ್ಚೂರು ಕಾನ ನಿವಾಸಿ ಚಂದ್ರಶೇಖರ (20 ವ) ಎಂದು ಗುರುತಿಸಲಾಗಿದೆ.


ಚಂಪಾ ಷಷ್ಠಿಯ ಪ್ರಯುಕ್ತ ಕುಡುಪು ದೇವಸ್ಥಾನಕ್ಕೆ ಭೇಟಿ ನೀಡಿ ಚಂದ್ರಶೇಖರ ಮನೆಗೆ ಮರಳುತ್ತಿದ್ದರು. ಈ ವೇಳೆ ತೆಂಕಮಿಜಾರು ಬಳಿ ತಿರುವಿನಲ್ಲಿ ಬೋರ್ ವೆಲ್ ಲಾರಿ – ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಚಂದ್ರಶೇಖರ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Facebook Comments

comments