LATEST NEWS
ಇಂದಿನಿಂದ ಇ ಟಿಕೆಟ್ ಪಾಸ್ ಮೂಲಕ ಕಟೀಲು ದೇವಿ ದರ್ಶನಕ್ಕೆ ಅವಕಾಶ

ಮಂಗಳೂರು ಜೂನ್ 14: ಲಾಕ್ ಡೌನ್ ಸಡಿಲಿಕೆ ನಂತರ ಮೊದಲ ಬಾರಿಗೆ ಇಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಲಾಕ್ ಡೌನ್ ಸಡಿಲಿಕೆ ಅನ್ ಲಾಕ್ 1.0 ಪ್ರಕಾರ ಜೂನ್ 8 ರಿಂದ ದೇವಸ್ಥಾನಗಳಲ್ಲಿ ಮಾರ್ಗಸೂಚಿಗಳನ್ವಯ ತೆರಯಲು ಸೂಚನೆ ನೀಡಲಾಗಿತ್ತು. ಆದರೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಹಿನ್ನಲೆ, ಭಕ್ತರ ಸರತಿ ಸಾಲಿನ ವ್ಯವಸ್ಥೆಯ ಕೊರತೆಯಿಂದ ಮುಂದೂಡಲಾಗಿತ್ತು.

ನಂತರ ದೇವಸ್ಥಾನದ ವೆಬ್ ಸೈಟ್ ಮೂಲಕ ಇ ಟಿಕೆಟ್ ವ್ಯವಸ್ಥೆ ಮಾಡಿ ಇಂದಿನಿಂದ ಇಂದಿನಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ದೇವಾಸ್ಥಾನದಲ್ಲಿ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ನಂತರ ಸಾಮಾಜಿಕ ಅಂತರ ಕಾಪಾಡಲು ದೇಗುಲದ ವಠಾರದಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ಬಾಕ್ಸ್ ಗಳನ್ನು ಮಾಡಲಾಗಿದೆ.
ಸದ್ಯ ಪಾಸ್ ಪಡೆದಿರುವ ಭಕ್ತರಿಗೆ ಬೆಳಿಗ್ಗೆ ಗಂಟೆ 7.30 ರಿಂದ ರಾತ್ರಿ 7.30 ರವರೆಗೆ ದೇವರ ದರ್ಶನಕ್ಕೆ ಸಮಯ ನಿಗದಿ ಪಡಿಸಲಾಗಿದೆ. ಸ್ಥಳೀಯ ಭಕ್ತರಿಗೆ ಪಾಸ್ ಇಲ್ಲದೆ ಬೆಳಿಗ್ಗೆ 6 ರಿಂದ 7.30ರವರೆಗೆ ದರ್ಶನ. ಇನ್ನು ಸದ್ಯ ದೇವಸ್ಥಾನದಲ್ಲಿ ಅನ್ನಪ್ರಸಾದ ಸೇರಿದಂತೆ ಯಾವುದೇ ಸೇವೆಗಳಿಗೆ ಅವಕಾಶ ಇಲ್ಲ.