Connect with us

  LATEST NEWS

  ಬೈಕ್ ಗ್ಯಾರೇಜ್‌ನಲ್ಲಿ ಯುವಕನ ಪ್ರಾಣ ತೆಗೆದ ಕರೆಂಟ್ ಶಾಕ್..!

  ಕಾಸರಗೋಡು : ಬೈಕ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ  ಯುವಕನೋರ್ವ ಕರೆಂಟ್ ಶಾಕ್ ಗೆ ಬಲಿಯಾದ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ.

  ಮಂಜೇಶ್ವರ ಹೊಸಂಗಡಿ ಸಮೀಪದ ಅಂಗಡಿಪದವು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದ್ದು ಸ್ಥಳೀಯ ಯುವಕ ಪ್ರಜ್ವಲ್ (19) ಮೃತಪಟ್ಟ ದುರ್ದೈವಿ. ಬೈಕ್  ಗ್ಯಾರೇಜ್‌ನಲ್ಲಿ ದುಡಿಯುತ್ತಿದ್ದ ಪ್ರಜ್ವಲ್ ಗೆ ಕೆಲಸದ ವೇಳೆ ಏಕಾಏಕಿ ಶಾಕ್ ತಗಲಿದ್ದು , ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ವಿದ್ಯುತ್  ತಪ್ಪಿಸಿ  ಗಂಭಿರ ಗಾಯಗೊಂಡ ಯುವಕನನ್ನು ಉಪ್ಪಳದ ಆಸ್ಪತ್ರೆಗೆ ಕೊಂಡೊಯ್ದರೂ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಂಜೆಶ್ವರ  ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply