Connect with us

    KARNATAKA

    ಸಭೆ ಸಮಾರಂಭದಲ್ಲಿ ಹಾರ, ತುರಾಯಿ ಬೇಡ, ಕನ್ನಡ ಪುಸ್ತಕಗಳನ್ನು ನೀಡಿ

    ಬೆಂಗಳೂರು ಅಗಸ್ಟ್ 10: ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.


    ಈಗಾಗಲೇ ಇಂಧನ ಸಚಿವ ಸುನಿಲ್ ಕುಮಾರ್ ತನಗೆ ಹೂ,ಹಾರ, ತುರಾಯಿ ತರಬಾರದು ಅದರ ಬದಲಿಗೆ ಪುಸ್ತಕ ತನ್ನಿ ಎಂದು ಮನವಿ ಮಾಡಿದ್ದರು, ಈಗ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಹೂಗುಚ್ಚ, ಹಾರ, ತುರಾಯಿ ಬದಲಿಗೆ ಪುಸ್ತಕ ನೀಡಿ ಎಂದಿದ್ದಾರೆ.


    ಮುಖ್ಯಮಂತ್ರಿಗಳು ಹೇಳಿದ ಬೆನ್ನಲೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್‌ ಆದೇಶ ಹೊರಡಿಸಿದ್ದು, ಸಂಬಂಧಪಟ್ಟ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಎಲ್ಲಾ ಸಂಸ್ಥೆಗಳು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಭೆ-ಸಮಾರಂಭಗಳಲ್ಲಿ ಅತಿಥಿಗಳಿಗೆ ಇತರ ಕೊಡುಗೆಯ ಬದಲು ಕನ್ನಡ ಪುಸ್ತಕಗಳನ್ನು ನೀಡುವ ಸಲಹೆಗೆ ಪೂರಕವಾಗಿ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply