Connect with us

    LATEST NEWS

    ಬೆಳ್ಮಣ್ ಟೋಲ್ ಗೇಟ್ ಗೆ ವಿರೋಧ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿ ಬಂದ್

    ಬೆಳ್ಮಣ್ ಟೋಲ್ ಗೇಟ್ ಗೆ ವಿರೋಧ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿ ಬಂದ್

    ಉಡುಪಿ ಡಿಸೆಂಬರ್ 20: ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ಬೆಳ್ಮಣ್‌ನಲ್ಲಿ ಟೋಲ್‌ಗೇಟ್ ಅಳವಡಿಸಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಟೋಲ್ ವಿರೋಧಿ ಹೋರಾಟ ಸಮಿತಿ ಕಾರ್ಕಳ – ಪಡುಬಿದ್ರಿ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಿದೆ.

    ಟೋಲ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಈ ಪ್ರತಿಭಟನೆ ನಡೆಸಲಾಗಿದ್ದು, ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯನ್ನು ಅವಲಂಬಿಸಿರುವ ಸುತ್ತಮುತ್ತಲಿನ ಸುಮಾರು 27 ಹಳ್ಳಿಗಳ ಗ್ರಾಮಸ್ಥರು, ನಾಗರಿಕರು, ಎಲ್ಲ ಸಂಘ ಸಂಸ್ಥೆಗಳು ಹಾಗೂ ವರ್ತಕರು, ಉದ್ಯಮಿಗಳು, ವಾಹನ ಚಾಲಕ ಮಾಲೀಕರು ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.

    ಬೃಹತ್ ಪ್ರತಿಭಟನೆ ಜಾಥಾ ಬೆಳ್ಮಣ್ ಪೇಟೆಯಿಂದ ಬೆಳ್ಮಣ್ ಚರ್ಚ್‌ವರೆಗೆ ಸಾಗಿ ಬಳಿಕ ನಂದಳಿಕೆ ಬೋರ್ಡು ಶಾಲೆವರೆಗೆ ತೆರಳಿ ನಂತರ ಬೆಳ್ಮಣ್ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply