LATEST NEWS
ಕಾರ್ಕಳ: ಜೆಸಿಬಿಗೆ ಬೈಕ್ ಡಿಕ್ಕಿ, ಸವಾರ ಪ್ರತ್ಯಕ್ಷ್ ಶೆಟ್ಟಿ ಮೃತ್ಯು..!

ಕಾರ್ಕಳ : ತಮ್ಮನನ್ನು ಶಾಲೆಗೆ ಬಿಟ್ಟುಬರಲು ಬೈಕಿನಲ್ಲಿ ತೆರಳುತ್ತಿದ್ದಾಗ ಬೈಕ್ಕೊಂದು ಜೆಸಿಬಿಗೆ ಡಿಕ್ಕಿ ಹೊಡೆದ ಕಾರಣ ಬೈಕ್ ಸವಾರ ಮೃತಪಟ್ಟ ಕಾರ್ಕಳ ಹೆಬ್ರಿಯ ಶಿವಪುರದಲ್ಲಿ ಶುಕ್ರವಾರ ಸಂಭವಿಸಿದೆ.
ಇಲ್ಲಿನ ನಾಯರ್‌ಕೋಡು ನಿವಾಸಿ ಪ್ರತ್ಯಕ್ಷ್ ಶೆಟ್ಟಿ (21) ಮೃತ ಬೈಕ್ ಸವಾರನಾಗಿದ್ದು ಪ್ರತ್ಯಕ್ಷ್ ತಮ್ಮನನ್ನು ಶಾಲೆಗೆ ಬಿಡಲು ಹೊಗುತ್ತಿದ್ದ ಸಂದರ್ಭ ಪೆರ್ಡೂರು ಗ್ರಾಮದ ನಾಯರ್‌ಕೋಡ್‌ನಲ್ಲಿ ಜೆಸಿಬಿಗೆ ಪ್ರತ್ಯಕ್ಷ್ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಪ್ರತ್ಯಕ್ಷ್ ಮೃತಪಟ್ಟಿದ್ದಾರೆ. ಬೈಕಿನಲ್ಲಿದ್ದ ಪ್ರತ್ಯಕ್ಷ್ ಅವರ ಸಹೋದರ ಪ್ರಿತೇಶ್ ಕೂಡ ಗಾಯಗೊಂಡಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
