Connect with us

    FILM

    ಇದು ಬರಿ ಬೆಳಕಲ್ಲ ದರ್ಶನ – ನವೆಂಬರ್ 27 ಕ್ಕೆ ಕಾಂತಾರ ಪ್ರೀಕ್ವೆಲ್‌ ಫಸ್ಟ್‌ ಲುಕ್‌ ರಿಲೀಸ್

    ಬೆಂಗಳೂರು ನವೆಂಬರ್ 25 :ಕೊನೆಗೂ ಕಾಂತಾರ ಸಿನೆಮಾದ ಮುಂದಿನ ಭಾಗದ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದ್ದು, ನವೆಂಬರ್ 27 ರಂದು ಕಾಂತಾರ ಸಿನೆಮಾದ ಮುಂದಿನ ಭಾಗದ ಫಸ್ಟ್ ಲುಕ್ ರಿಲೀಸ್ ಆಗಲಿದೆ.


    ಇಡೀ ವಿಶ್ವವನ್ನೇ ತಿರುಗಿ ನೋಡುವಂತೆ ಮಾಡಿದ್ದ ಕಾಂತಾರ ಸಿನೆಮಾದ ಎರಡನೇ ಭಾಗ ಅಥವಾ ಪ್ರೀಕ್ವೇಲ್ ನ ಬಗ್ಗೆ ಇದೀಗ ಒಂದು ಶುಭ ಸುದ್ದಿ ಸಿಕ್ಕಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ಡೇಟ್ ನೀಡಿರುವ ಹೊಂಬಾಳೆ ನವೆಂಬರ್ 27 ರಂದು ಫಸ್ಟ್ ಲುಕ್ ರೀಲಿಸ್ ಆಗಲಿದೆ ಎಂದಿದೆ. ರಿಷಬ್‌ ಶೆಟ್ಟಿ ಬರೆದು ನಿರ್ದೇಶನ ಮಾಡಿರುವ ‘ಕಾಂತಾರ’ ತುಳುನಾಡಿನ ದೈವದ ಆಚರಣೆ ಹಾಗೂ ಸಂಪ್ರದಾಯದ ಸುತ್ತ ಸಾಗಿದ ಕಥೆಯನ್ನು ಒಳಗೊಂಡಿತ್ತು. ಕನ್ನಡದಲ್ಲಿ ಬಿಡುಗಡೆಯಾಗಿ ಪ್ರಾದೇಶಿಕ ಭಾಷೆಯಲ್ಲಿ ರಿಮೇಕ್ ಆಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು.


    ಇದೀಗ ಕಾಂತಾರ ದ ಬಾಗ 2 ಅಥವಾ ಪ್ರೀಕ್ವೆಲ್‌ ನಲ್ಲಿ ಪಂಜುರ್ಲಿ ದೈವದ ಹುಟ್ಟು ಹಾಗೂ ಮೂಲದ ಕಥೆ ಇರಲಿದೆ ಎನ್ನಲಾಗಿದೆ. ಇದೇ ತಿಂಗಳ ಕೊನೆಯಲ್ಲಿ ಸಿನಿಮಾದ ಮುಹೂರ್ತ ಉಡುಪಿಯಲ್ಲಿ ನಡೆಯಲಿದೆ ಎನ್ನಲಾಗಿದೆ. ಈ ಮಾತು ಚರ್ಚೆಯಲ್ಲಿರುವಾಗಲೇ ಇದೀಗ ಹೊಂಬಾಳೆ ಫಿಲ್ಮ್ಸ್ ಸಿನಿಮಾದ ಫಸ್ಟ್ ರಿಲೀಸ್ ಮಾಡುವ ದಿನಾಂಕವನ್ನು ರಿವೀಲ್ ಮಾಡಿದೆ. ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ ಎಂದು ಪೋಸ್ಟ್‌ ನಲ್ಲಿ ಬರೆದುಕೊಂಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply