Connect with us

    FILM

    ಜನವರಿ ಮೂರನೇ ವಾರದಿಂದ ಬಿಗ್‍ಬಾಸ್ ಆರಂಭ ಸಾಧ್ಯತೆ…!

    ಬೆಂಗಳೂರು, ನವೆಂಬರ್ 25: ಕನ್ನಡದ ಬಿಗ್‍ಬಾಸ್ ಜನವರಿ ಮೂರನೇ ವಾರದಿಂದ ಆರಂಭಗೊಳ್ಳಲಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರತಿ ವರ್ಷ ಅಕ್ಟೋಬರ್ ನಲ್ಲಿ ಬಿಗ್‍ಬಾಸ್ ಆರಂಭವಾಗುತ್ತಿತ್ತು. ಕೊರೊನಾ ಹಿನ್ನೆಲೆ ಬಿಗ್‍ಬಾಸ್ ಮುಂದೂಡಿಕೆ ಮಾಡಲಾಗಿತ್ತು.

    ಬಿಗ್‍ಬಾಸ್ ಪ್ರಸಾರವಾಗುವ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಜೊತೆ ನಟ ಕಿಚ್ಚ ಸುದೀಪ್ ಮಾತುಕತೆ ನಡೆಸುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ. ಈ ಬಾರಿ ಬಿಗ್‍ಬಾಸ್ ಮನೆಗೆ ಪ್ರವೇಶ ಪಡೆಯುವ 15 ಸ್ಪರ್ಧಿಗಳ ಹೆಸರು ಅಂತಿಮವಾಗಿದೆ ಎನ್ನಲಾಗಿದೆ.

    ಕೊರೊನಾ ಆತಂಕದ ನಡುವೆಯೂ ಹಿಂದಿ, ತೆಲಗು, ತಮಿಳು ಭಾಷೆಯ ಬಿಗ್‍ಬಾಸ್ ಆರಂಭಗೊಂಡಿವೆ. ಇದೀಗ ಕನ್ನಡದ ಬಿಗ್‍ಬಾಸ್ ಆರಂಭದ ಸಿದ್ಧತೆಗಳು ಸಹ ಶುರುವಾಗಿದ್ದು, ಈ ಬಾರಿ ಬಿಗ್ ಮನೆ ಯಾರು ಪ್ರವೇಶಿಸುತ್ತಾರೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *