Connect with us

LATEST NEWS

ಪಚ್ಚನಾಡಿ ರೈಲ್ವೇ ಟ್ರ್ಯಾಕ್‌ ನಲ್ಲಿ ಯುವಕನ ಶವ ಪತ್ತೆ..!

ಮಂಗಳೂರು ನವೆಂಬರ್ 25: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಅಪರಿಚಿತ ಯುವಕನ ಶವನೊಂದು ಪತ್ತೆಯಾಗಿದೆ. ಸುಮಾರು 25 ರಿಂದ 30 ವರ್ಷ ಪ್ರಾಯದ ಯುವಕನ ಶವ ಇದಾಗಿದೆ. ರೈಲ್ವೇ ಹಳಿಯಲ್ಲಿ ರುಂಡ ಬೇರ್ಪಟ್ಟ ಸ್ಥಿತಿಲ್ಲಿ ಇದು ಪತ್ತೆಯಾಗಿದ್ದು, ರೈಲಿಗೆ  ತಲೆಕೊಟ್ಟು ಈ ತ ಆತ್ಮ ಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತ ವಾಗಿದ್ದು,


ಸ್ಥಳಕ್ಕೆ ರೈಲ್ವೇ ಪೊಲೀಸರು ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವ್ಯಕ್ತಿಯ ವಿವರಗಳು ಲಭ್ಯವಾಗದೆ ಇದ್ದ ಕಾರಣ ಪರಿಚಯ ಇದ್ದರವರು ರೈಲ್ವೇ ಪೊಲೀಸರನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.