FILM
ನೈಟ್ ಡ್ರೆಸ್‌ಗಳನ್ನು ಸಾಮಾನ್ಯ ಬಟ್ಟೆ ಎಂಬಂತೆ ಧರಿಸುವ ಇಂತಹ ಮೂರ್ಖರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಬಾರದು -ಕಂಗನಾ

ಮುಂಬೈ ಮೇ 27: ಸದಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಕಂಗನಾ ರಣಾವತ್ ಇದೀಗ ದೇವಸ್ಥಾನದೊಳಗೆ ವಸ್ತ್ರ ಸಂಹಿತೆ ಮಾಡಬೇಕೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.
ಹುಡುಗಿಯೊಬ್ಬಳು ಹಿಮಾಚಲ ಪ್ರದೇಶದ ಕಂಗ್ರಾದಲ್ಲಿರುವ ಬೈಜನಾಥ ದೇವಸ್ಥಾನಕ್ಕೆ ಹುಡುಗಿಯರು ಶಾರ್ಟ್ಸ್ ಧರಿಸಿ ಹೋಗಿದ್ದ ಪೋಟೋವನ್ನು ಟ್ವೀಟರ್ ಖಾತೆಯಲ್ಲಿ ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ್ದ ‘ಪಬ್, ನೈಟ್‌ಕ್ಲಬ್‌ಗೆ ಹೋಗುವಂತೆ ದೇವಸ್ಥಾನಕ್ಕೆ ಬಂದಿದ್ದಾರೆ. ಇಂತವರಿಗೆ ದೇವಸ್ಥಾನದ ಒಳಗೆ ಪ್ರವೇಶ ನೀಡಬಾರದು. ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ. ನನ್ನ ಅಭಿಪ್ರಾಯ ತಪ್ಪೋ ಸರಿಯೊ ಗೊತ್ತಿಲ್ಲ. ಏನೇ ಆದರೂ ನನ್ನ ಅಭಿಪ್ರಾಯಕ್ಕೆ ನಾನು ಬದ್ಧಳಾಗಿದ್ದೇನೆ‘ ಎಂದು ಟ್ವೀಟಿಗರು ಬರೆದುಕೊಂಡಿದ್ದರು.

ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಕಂಗನಾ ರನೌತ್, ಈ ವಿಷಯದಲ್ಲಿ ತಮ್ಮ ಅಭಿಪ್ರಾಯವೂ ಇದೇ ಆಗಿರುವುದಾಗಿ ಹೇಳಿದ್ದಾರೆ. ‘ಇದು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದು, ಅವರೇ ಆವಿಷ್ಕರಿಸಿದ ಬಟ್ಟೆಯಾಗಿದೆ. ಹಿಂದೊಮ್ಮೆ ವ್ಯಾಟಿಕನ್ ಸಿಟಿಗೆ ಹೋಗಿದ್ದಾಗ, ಶಾರ್ಟ್ಸ್ ಧರಿಸಿದ್ದೆನೆಂಬ ಕಾರಣಕ್ಕೆ ನನಗೆ ಪ್ರವೇಶ ನಿರಾಕರಿಸಿದರು. ಕೊನೆಗೆ ಹೋಟೆಲ್‌ಗೆ ಹೋಗಿ ಬಟ್ಟೆ ಬದಲಿಸಿ ಚರ್ಚ್ ಪ್ರವೇಶ ಮಾಡಬೇಕಾಯಿತು. ನೈಟ್ ಡ್ರೆಸ್‌ಗಳನ್ನು ಸಾಮಾನ್ಯ ಬಟ್ಟೆ ಎಂಬಂತೆ ಧರಿಸುವ ಇಂತಹ ಮೂರ್ಖರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಬಾರದು ಅಷ್ಟೇ‘ ಎಂದು ಹೇಳಿದರು.