Connect with us

LATEST NEWS

ರಣವೀರ್‌, ರಣ್‌ಬೀರ್‌, ವಿಕ್ಕಿ ಡ್ರಗ್ಸ್‌ ಪರೀಕ್ಷೆಗೆ ಒಳಪಡಬೇಕು – ಕಂಗನಾ ರಣಾವತ್‌

ಮುಂಬೈ: ಸ್ಯಾಂಡಲ್ ವುಡ್ ನ ಡ್ರಗ್ ಸುದ್ದಿಯಾಗುತ್ತಿದ್ದಂತೆ ಕಂಗನಾ ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ . ಹೌದು ಬಾಲಿವುಡ್ ನ 4 ಮಂದಿ ಖ್ಯಾತನಟರು ಡ್ರಗ್‌ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನು ನೀಡಲಿ ಎಂದು ನಟಿ ಕಂಗನಾ ರಣಾವತ್‌ ವಿನಂತಿಸಿಕೊಂಡಿದ್ದಾರೆ.

ರಣ್‌ವೀರ್‌ ಸಿಂಗ್‌, ರಣ್‌ಬೀರ್‌ ಕಪೂರ್‌, ಅಯಾನ್‌ ಮುಖರ್ಜಿ, ವಿಕ್ಕಿ ಕೌಶಿಕ್‌ ಡ್ರಗ್‌ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನು ನೀಡಬೇಕು. ಈ ನಟರು ಕೊಕೇನ್‌ ಸೇವಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ. ತಮ್ಮ ಮೇಲೆ ಬಂದಿರುವ ಆರೋಪವನ್ನು ಸುಳ್ಳು ಮಾಡಲು ನಟರು ರಕ್ತದ ಮಾದರಿಯನ್ನು ನೀಡಬೇಕೆಂದು ವಿನಂತಿಸುತ್ತಿದ್ದೇನೆ. ಈ ವ್ಯಕ್ತಿಗಳು ಯುವ ಜನತೆಗೆ ಮಾದರಿಯಾಗಿರುವ ಕಾರಣ ಆರೋಪ ಮುಕ್ತವಾಗಬೇಕೆಂದು ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್‌ ಮಾಡಿದ್ದಾರೆ.

ಈ ವೇಳೆ ಬಹಳ ಪ್ರಸಿದ್ಧ ಪಡೆದ ಸ್ಟಾರ್‌ಗಳ ಪಾರ್ಟಿಗಳಲ್ಲಿ ಡ್ರಗ್ಸ್‌ ಇರುವುದು ಸಾಮಾನ್ಯ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಶೇ.99ರಷ್ಟು ಸ್ಟಾರ್‌ಗಳು ಬಯಲಾಗುತ್ತಾರೆ. ಈ ವಿಚಾರಕ್ಕೆ ನಾನು ಗ್ಯಾರಂಟಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಕಳೆದ ವರ್ಷ, ರಾಜಕಾರಣಿ ಮಂಜಿಂದರ್ ಸಿಂಗ್ ಸಿರ್ಸಾ ಅವರು ಕರಣ್ ಜೋಹರ್ ಹಂಚಿಕೊಂಡಿದ್ದ ವಿಡಿಯೋವನ್ನು ಟ್ವೀಟ್‌ ಮಾಡಿದ್ದರು. ಇದರಲ್ಲಿ ಇದ್ದವರು ಮಾದಕ ವಸ್ತುಗಳನ್ನು ಸೇವಿಸಿದ ಸ್ಥಿತಿಯಲ್ಲಿ ಇದ್ದಾರೆ. ಇದು ಬಾಲಿವುಡ್‌ ಡ್ರಗ್‌ ಪಾರ್ಟಿ ಎಂದು ಕರೆದಿದ್ದರು.

ವಿಡಿಯೋದಲ್ಲಿ ರಣಬೀರ್ ಕಪೂರ್‌, ಅಯಾನ್, ವಿಕ್ಕಿ ಕೌಸಿಕ್‌, ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ಮಲೈಕಾ ಅರೋರಾ, ಶಾಹಿದ್ ಕಪೂರ್, ವರುಣ್ ಧವನ್ ಮತ್ತು ಇತರರು ಭಾಗವಹಿಸಿದ್ದರು .

Facebook Comments

comments