LATEST NEWS
ಶಬರಿಮಲೆ ಪ್ರವೇಶಿಸಿ ಮನೆಗೆ ಬಂದ ಕನಕದುರ್ಗ ಗೆ ಹಿಗ್ಗಾಮುಗ್ಗ ಥಳಿಸಿದ ಕುಟುಂಬಸ್ಥರು
ಶಬರಿಮಲೆ ಪ್ರವೇಶಿಸಿ ಮನೆಗೆ ಬಂದ ಕನಕದುರ್ಗ ಗೆ ಹಿಗ್ಗಾಮುಗ್ಗ ಥಳಿಸಿದ ಕುಟುಂಬಸ್ಥರು
ಕೇರಳ ಜನವರಿ 15: ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿ ಇಬ್ಬರು ಮಹಿಳೆಯಲ್ಲಿ ಒಬ್ಬಳಾದ ಕನಕದುರ್ಗ ಮೇಲೆ ಕುಟುಂಬಸ್ಥರು ಹಲ್ಲೆ ಮಾಡಿದ್ದು, ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಬರಿಮಲೆ ಪ್ರವೇಶಿಸಿದ ನಂತರ ಭದ್ರತೆಯ ಕಾರಣಕ್ಕೆ ಕೆಲ ಕಾಲ ಅಜ್ಞಾತ ಸ್ಥಳದಲ್ಲಿದ್ದ ಅವರು ಸೋಮವಾರವಷ್ಟೇ ಮನೆಗೆ ಹಿಂದಿರುಗಿದ್ದರು. ಈ ವೇಳೆ ಸಂಬಂಧಿಕರು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದರಿಂದ ತೀವ್ರ ಅಸ್ವಸ್ಥರಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಪ್ರೀಂಕೋರ್ಟ್ ನ ಶಬರಿಮಲೆಗೆ ಎಲ್ಲಾ ವಯೋಮಿತಿಯ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ನಂತರ ಕೇರಳದ ಇಬ್ಬರು ಮಹಿಳೆಯರಾದ ಬಿಂದು ಮತ್ತು ಕನಕದುರ್ಗ ಜನವರಿ 2 ರಂದು ಶಬರಿಮಲೆ ದೇವಾಲಯವನ್ನು ಪ್ರವೇಶಿಸಿದ್ದರು.
ಶಬರಿಮಲೆ ದೇವಸ್ಥಾನ ಪ್ರವೇಶಿಸಿದ ನಂತರ ದೇವಾಲಯದ ಸಂಪ್ರದಾಯವನ್ನು ಮುರಿದ ಇಬ್ಬರ ವಿರುದ್ಧ ಭಾರೀ ದೇಶದಾದ್ಯಂತ ಭಾರಿ ಆಕ್ರೋಶ ಕೇಳಿಬಂದಿತ್ತು. ಅಲ್ಲದೆ ಕೇರಳದಲ್ಲಿ ಭಾರಿ ಪ್ರಮಾಣದಲ್ಲಿ ಹಿಂಸಾಚಾರ ಕೂಡ ನಡೆದಿತ್ತು. ಅಲ್ಲದೇ ಜೀವಬೆದರಿಕೆ ಬಂದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಇಬ್ಬರನ್ನು ಕೊಚ್ಚಿ ಬಳಿಯ ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು.
ಇತ್ತೀಚೆಗಷ್ಟೇ ಇಬ್ಬರು ಅಜ್ಞಾತ ಸ್ಥಳದಿಂದ ಹೊರಗೆ ಬಂದು ತಮ್ಮ ಸಾಮಾನ್ಯ ಜೀವನ ನಡೆಸಲು ನಾವು ರೆಡಿಯಾಗಿದ್ದೇವೆ ಎಂದು ಹೇಳಿದ್ದರು. ಈ ಗಿನ್ನಲೆಯಲ್ಲಿ ಕೇರಳದ ನಾಯರ್ ಸಮುದಾಯದ 39 ವರ್ಷದ ಕನಕದುರ್ಗ ಅಜ್ಞಾತ ಸ್ಥಳದಿಂದ ಮಂಗಳವಾರ ಬೆಳಗ್ಗೆ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ.
ಆದರೆ ಮನೆಗೆ ಬಂದಕೂಡಲೇ ಅತ್ತೆ ಕನಕದುರ್ಗ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದ್ದು ಈಗ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮನೆಗೆ ಕನಕದುರ್ಗ ಬಂದ ಕೂಡಲೇ ಅತ್ತೆ ಮತ್ತು ಸೊಸೆ ನಡುವೆ ಜಟಾಪಟಿ ನಡೆದು, ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು, ಅತ್ತೆ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ತನ್ನ ಮೇಲೆ ಸೊಸೆ ಕನಕದುರ್ಗ ಹಲ್ಲೆ ಮಾಡಿದ್ದಾಳೆ ಎಂದು ಅತ್ತೆ ಆರೋಪಿಸಿದ್ದಾರೆ.
ದೇವಾಲಯ ಪ್ರವೇಶಿಸಿ ದೇಶವ್ಯಾಪಿ ಸುದ್ದಿಯಾಗಿದ್ದ ಕನಕದುರ್ಗ ಅವರ ಪತಿ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಕನಕದುರ್ಗ ಮತ್ತು ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಕುಟುಂಬದ ಸದಸ್ಯರು ಪ್ರತಿಕ್ರಿಯಿಸಿದ್ದರು.
44 ವರ್ಷ ಬಿಂದು ತಲಶೇರಿಯಲ್ಲಿ ಕಾಲೇಜು ಉಪನ್ಯಾಸಕಿ ಮತ್ತು ಸಿಪಿಐ(ಎಂ) ಕಾರ್ಯಕರ್ತೆಯಾಗಿದ್ದು, ಕನಕದುರ್ಗ ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.