BANTWAL
‘ಕಂಬಳ ವೀರ’ ಶ್ರೀನಿವಾಸ ಗೌಡರಿಂದ ಮತ್ತೊಂದು ದಾಖಲೆ…

ಬಂಟ್ವಾಳ, ಮಾರ್ಚ್ 29: ಕಂಬಳದ ಉಸೈನ್ ಬೋಲ್ಟ್ ಎಂದೆ ಖ್ಯಾತರಾದ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಅವರು ಕಂಬಳ ಓಟದಲ್ಲಿ ತಮ್ಮದೇ ದಾಖಲೆಯನ್ನು ಮತ್ತೆ ಮುರಿದು ಹೊಸ ದಾಖಲೆ ಬರೆದಿದ್ದಾರೆ.
ಕಳೆದ ವಾರ ಬೆಳ್ತಂಗಡಿಯ ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು 100 ಮೀ. ದೂರವನ್ನ ಕೇವಲ 8.96 ಸೆಕೆಂಡ್‌ಗಳಲ್ಲಿ ಓಡುವ ಮೂಲಕ ದಾಖಲೆ ಬರೆದಿದ್ದರು.

ಭಾನುವಾರ ಮೈರಾದಲ್ಲಿ ನಡೆದ ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಶ್ರೀನಿವಾಸ ಗೌಡ ಅವರು ಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಶೆಟ್ಟಿಯವರ ಕೋಣಗಳನ್ನು ಓಡಿಸಿ 100 ಮೀ. ದೂರವನ್ನ ಕೇವಲ 8.78 ಸೆಕೆಂಡ್ ನಲ್ಲಿ ಓಡಿಸಿ ಹೊಸ ದಾಖಲೆಯನ್ನ ಮತ್ತೆ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಮೂಲಕ ಈ ಹಿಂದೆ ತಮ್ಮದೇ ಹೆಸರಲ್ಲಿ ಇದ್ದ ದಾಖಲೆಯನ್ನ ಮತ್ತೊಮ್ಮೆ ಪುಡಿಗಟ್ಟಿದ್ದಾರೆ.