Connect with us

  FILM

  ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕಮಗುವನ್ನು ಬೇಟೆಯಾಡುತ್ತಿದ್ದಾರೆ -ಕಮಲ್ ಹಾಸನ್

  ಚೆನ್ನೈ ಸೆಪ್ಟೆಂಬರ್ 23 : ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕಮಗುವನ್ನು ಬೆಟೆಯಾಡಲಾಗುತ್ತಿದೆ ಎಂದು ನಟ ಮಕ್ಕಳ್ ನೀಧಿ ಮೈಯಂ ಮುಖ್ಯಸ್ಥ ಕಮಲ್ ಹಾಸನ್ ಹೇಳಿದ್ದಾರೆ. ಚೆನ್ನೈನಲ್ಲಿ ತಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಚಿವ ಉದಯನಿಧಿ ಸ್ಟಾಲಿನ್ ಹೆಸರನ್ನು ಹೇಳದೆ ಇಂದು ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕಾಗಿ ಚಿಕ್ಕ ಮಗುವನ್ನು ಬೇಟೆಯಾಡುತ್ತಿದ್ದಾರೆ, ಬಿಜೆಪಿ ಮತ್ತು ಇನ್ನಿತರ ಸಂಘಟನೆಗಳು ಮಗುವನ್ನು ಟಾರ್ಗೆಟ್‌ ಮಾಡುತ್ತಿವೆ ಎಂದರು.


  ಉದಯನಿಧಿ ಅವರ ತಾತ ಕರುಣಾನಿಧಿ ಅವರೂ ಈ ಬಗ್ಗೆ ಮಾತನಾಡಿದ್ದಾರೆ. ದಿವಂಗತ ಪೆರಿಯಾರ್ ವಿ ರಾಮಸಾಮಿ ಅವರೂ ಸಾಮಾಜಿಕ ಅನಿಷ್ಠಗಳನ್ನು ಎಷ್ಟು ಕಟುವಾಗಿ ವಿರೋಧಿಸಿದ್ದರು ಎಂಬುದನ್ನ ನಾವು ಅವರ ಜೀವನ ಸ್ವಭಾವದಿಂದಲೇ ಅರ್ಥಮಾಡಿಕೊಳ್ಳಬಹುದು. ನಮಗೆಲ್ಲಾ ಸನಾತನ ಎಂಬ ಪದದ ಅರ್ಥ ತಿಳಿಸಿದ್ದೇ ಅವರಿಂದ ಎಂದು ಹೇಳಿದ್ದಾರೆ.

  ಮೊದಲು ಪೆರಿಯಾರ್‌ ಅವರು ಕಾಶಿಯಲ್ಲಿ ಪೂಜೆ ಮಾಡುತ್ತಿದ್ದರು, ಆದ್ರೆ ಅದೆಲ್ಲವನ್ನೂ ತ್ಯಜಿಸಿ ಮಕ್ಕಳ ಸೇವೆಯೇ ಮಹಾ ಸೇವೆ ಅಂತಾ ಭಾವಿಸಿ ಬರಬೇಕಾದ್ರೆ ಅವರಿಗೆ ಎಷ್ಟು ಕೋಪ ಇದ್ದಿರಬೇಕು. ಅವರನ್ನ ಯಾವುದೇ ರಾಜಕೀಯ ಪಕ್ಷಗಳು ಸ್ವಂತ ಎಂದು ಹೇಳುವಂತಿಲ್ಲ. ಇಡೀ ತಮಿಳುನಾಡಿಗೆ ಅವರು ನಾಯಕರು ಎಂದು ಶ್ಲಾಘಿಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply