Connect with us

BANTWAL

ಕಲ್ಲಡ್ಕದಲ್ಲಿ ಮತ್ತೆ ಕಳ್ಳರ ಹಾವಳಿ – ಸೂಪರ್ ಬಝಾರ್ ನಲ್ಲಿ ಕಳ್ಳತನ

ಬಂಟ್ವಾಳ ಫೆಬ್ರವರಿ 06: ಕಲ್ಲಡ್ಕ ಪರಿಸರದಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ಕಲ್ಲಡ್ಕದ ಕೆಟಿ ಹೊಟೇಲ್ ನಿಂದ ಕಳ್ಳತನವಾದ ಬೆನ್ನಲ್ಲೇ ಇದೀಗ ಸೂಪರ್ ಬಝಾರ್ ಒಂದರ ಶಟರ್ ಬೀಗ ಮುರಿದು ಸಾವಿರಾರು ರೂ. ನಗದು ಕಳವು ಮಾಡಿದ ಘಟನೆ ಕಲ್ಲಡ್ಕ ಪೇಟೆಯಲ್ಲಿ ಮಂಗಳವಾರ ರಾತ್ರಿ ವೇಳೆ ನಡೆದಿದೆ.


ತೊಕೊಟ್ಟು – ಕಲ್ಲಾಪು ನಿವಾಸಿ ಅನ್ಸಾರ್ ಎಂಬವರ ಮಾಲಕತ್ವದ ಕಲ್ಕಡ್ಕ ಸೂಪರ್ ಬಝಾರ್ ಇದಾಗಿದ್ದು, ಮಂಗಳವಾರ ರಾತ್ರಿ ವೇಳೆ ಶಟರ್ ನ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರು ಡ್ರಾಯರ್ ನಲ್ಲಿರಿಸಿದ್ದ ರೂ.58 ಸಾವಿರ ನಗದು ಕಳ್ಳತನ ಮಾಡಿದ್ದು, ಜೊತೆಗೆ ಅಂಗಡಿಯಲ್ಲಿರುವ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದಾಗಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕಳ್ಳತನದ ಬಗ್ಗೆ ಬಂಟ್ವಾಳ ‌ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Share Information

Continue Reading
Advertisement
Click to comment

Leave a Reply

Your email address will not be published. Required fields are marked *