LATEST NEWS
ತಮಿಳನಾಡು – ಅಪ್ರಾಪ್ತ ವಿಧ್ಯಾರ್ಥಿನಿಯ ಮೇಲೆ ಮೂವರು ಶಿಕ್ಷಕರಿಂದ ಅ*ತ್ಯಾಚಾರ

ಕೃಷ್ಣಗಿರಿ ಫೆಬ್ರವರಿ 06: ಪ್ರೌಢ ಶಾಲೆಯ ವಿಧ್ಯಾರ್ಥಿನಿ ಮೇಲೆ ಅದೇ ಶಾಲೆಯ ಮೂವರು ಶಿಕ್ಷಕರು ಅತ್ಯಾಚಾರ ನಡೆಸಿದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
ಕೃಷ್ಣಗಿರಿಯಲ್ಲಿರುವ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿನಿಯ ಮೇಲೆ ಈ ಅಘಾತಕಾರಿ ಘಟನೆ ನಡೆದಿದ್ದು, ಮೂವರು ಶಿಕ್ಷಕರನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಶಾಲಾ ವಿಧ್ಯಾರ್ಥಿನಿ ಒಂದು ತಿಂಗಳು ಶಾಲೆಗೆ ಬರದ ಹಿನ್ನಲೆ ಶಾಲೆಯ ಪ್ರಿನ್ಸಿಪಾಲ್ ವಿಧ್ಯಾರ್ಥಿನಿ ಮನೆಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ ವಿಧ್ಯಾರ್ಥಿನಿಯ ತಾಯಿ ವಿಚಾರವನ್ನು ತಿಳಿಸಿದ್ದಾರೆ. ಕೂಡಲೇ ಪ್ರಿನ್ಸಿಪಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ ಶಿಕ್ಷಕರಲ್ಲಿ ಒಬ್ಬರು ಮೊದಲು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ನಂತರ ಇತರ ಇಬ್ಬರಿಗೆ ಈ ವಿಷಯ ತಿಳಿದುಬಂದಾಗ ಅವರು ಮತ್ತೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. “ತನಿಖೆಯ ನಂತರ ನಾವು ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ” ಎಂದು ಕೃಷ್ಣಗಿರಿ ಎಸ್‌ಪಿ ಪಿ. ತಂಗದುರೈ ಹೇಳಿದರು. ಮೂವರು ಶಿಕ್ಷಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಆರೋಪಗಳನ್ನು ದಾಖಲಿಸಲಾಗಿದೆ. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸಂತ್ರಸ್ತ ವಿದ್ಯಾರ್ಥಿಯ ಪೋಷಕರು ಮತ್ತು ಸಂಬಂಧಿಕರು ಶಾಲೆಯನ್ನು ಸುತ್ತುವರೆದು ರಸ್ತೆ ತಡೆ ನಡೆಸಿದರು.
1 Comment