Connect with us

    FILM

    ಭಾರೀ ವಿವಾದಕ್ಕೆ ಕಾರಣವಾದ ಕಿರುಚಿತ್ರದ ಪೋಸ್ಟರ್…ಕಾಳಿ ಕೈಯಲ್ಲಿ ಸಿಗರೇಟ್ ನೀಡಿದ ಚಿತ್ರ ನಿರ್ದೇಶಕಿ

    ಮುಂಬೈ ಜುಲೈ 04 : ಸಾಕ್ಷ್ಯಚಿತ್ರದ ಫೋಸ್ಟರ್ ಒಂದರಲ್ಲಿ ಮಾ ಕಾಳಿಯ ಕೈಯಲ್ಲಿ ಸಿಗರೇಟ್ ನೀಡಿ ತೋರಿಸಿದ್ದು. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಇದೀಗ ಆಕ್ರೋಶಕ್ಕೆ ಕಾರಣವಾಗಿದ್ದು, ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಬಂಧನಕ್ಕೆ ಆಗ್ರಹಿಸಿದ್ದಾರೆ.


    ಲೀನಾ ಅವರ ಸಾಕ್ಷ್ಯಚಿತ್ರದ ಹೆಸರು ಕಾಳಿ. ಈ ಪೋಸ್ಟರ್‌ನಲ್ಲಿ ಮಾ ಕಾಳಿ ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದ್ದು, ಇದನ್ನು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾ ಕಾಳಿಯ ವೇಷಭೂಷಣದಲ್ಲಿ, ಕಲಾವಿದರು ಒಂದು ಕೈಯಲ್ಲಿ ತ್ರಿಶೂಲವನ್ನು ಮತ್ತು ಒಂದು ಕೈಯಲ್ಲಿ LGBTQ ಸಮುದಾಯದ ಧ್ವಜವನ್ನು ಹಿಡಿದಿದ್ದಾರೆ.

    ಇದು ಆಕ್ರೋಶಕ್ಕೆ ಕಾರಣವಾಗಿದ್ದು, ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರದ ಪೋಸ್ಟರ್ ಪ್ರಕಟವಾದ ಬೆನ್ನಲ್ಲೇ #arrestleenamanimekalai ಎಂದು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಪ್ರಾರಂಭವಾಗಿದ್ದು, ಸಾಮಾಜಿಕ ಮಾಧ್ಯಮ ಮಾತ್ರವಲ್ಲದೇ ಸಾರ್ವಜನಿಕ ವಲಯದಲ್ಲೂ ತೀವ್ರವಾದ ವಿರೋಧ ವ್ಯಕ್ತವಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply