LATEST NEWS
ಕದ್ರಿ ಉತ್ತರ ವಾರ್ಡಿನ ಈಡನ್ ಕ್ಲಬ್ ಬಳಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಜಕಾಲುವೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿ ಪೂಜೆ

ಮಂಗಳೂರು ಡಿಸೆಂಬರ್ 23: ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನ ಈಡನ್ ಕ್ಲಬ್ ಬಳಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಜಕಾಲುವೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಕ್ತಿನಗರ – ಈಡನ್ ಕ್ಲಬ್ ರಸ್ತೆಯಲ್ಲಿರುವ ರಾಜಕಾಲುವೆಯ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ 80 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ನಗರದ ವಿವಿಧ ಕಡೆಗಳಲ್ಲಿ ರಾಜಕಾಲುವೆಗಳ ಅಭಿವೃದ್ಧಿ, ತಡೆಗೋಡೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಮಂಗಳೂರು ನಗರದಲ್ಲಿ ಕೃತಕ ನೆರೆ ಹಾವಳಿಯನ್ನು ತಡೆಗಟ್ಟಲು ಯೋಜನೆ ರೂಪಿಸಲಾಗುವುದು ಎಂದು ಶಾಸಕ ಕಾಮತ್ ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಸ್ಥಳೀಯ ಕಾರ್ಪೋರೇಟರ್ ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಸ್ಥಾಯಿ ಸಮಿತಿಯ ಅದ್ಯಕ್ಷ ಕಿಶೋರ್ ಕೊಟ್ಟಾರಿ, ಮುಖಂಡರಾದ ವಸಂತ್ ಜೆ ಪೂಜಾರಿ, ಕಮಲಾಕ್ಷಿ, ಗಾಯತ್ರಿ, ವಿಜಯಶೆಣೈ, ಯಮುನಾ, ನವೀನ್, ಅನುರಾಧ, ವಿಶಾಲಾಕ್ಷಿ, ಶ್ರೀನಿವಾಸ ಕುಂಟಲ್ಪಾಡಿ, ಮಾರಪ್ಪ, ಪುಷ್ಪರಾಜ್, ಭವಾನಿಶಂಕರ್, ಹರೀಶ್ ವಕೀಲ, ನಾಗೇಶ್, ಸದಾಶಿವ ಭಟ್ರು, ಯಶೋದಾ, ಶಾರದ, ಸತ್ಯ, ಪದ್ಮಿನಿ, ದೃತೇಶ್, ಸುಜಾತ, ಲೋಕೇಶ, ಅಜಿತ್, ಆಶಾ ಮತ್ತಿತರರು ಉಪಸ್ಥಿತರಿದ್ದರು.