Connect with us

    LATEST NEWS

    ಕಣಿವೆಗೆ ಉರುಳಿದ ಸೇನಾ ವಾಹನ – 16 ಮಂದಿ ಯೋಧರು ಹುತಾತ್ಮ

    ಗ್ಯಾಂಗ್ಟಾಕ್ ಡಿಸೆಂಬರ್ 23: ಕಣಿವೆ ಒಂದಕ್ಕೆ ಸೇನಾ ವಾಹನ ಉರುಳಿದ ಪರಿಣಾಮ 16 ಮಂದಿ ಯೋಧರು ಹುತಾತ್ಮರಾದ ಘಟನೆ ಉತ್ತರ ಸಿಕ್ಕಿಂನ ಝೆಮಾದಲ್ಲಿ ಶುಕ್ರವಾರ ಸಂಭವಿಸಿದೆ. ಚಟ್ಟೆನ್‌ನಿಂದ ಥಂಗು ಪ್ರದೇಶಕ್ಕೆ ತೆರಳುತ್ತಿದ್ದ ಮೂರು ಸೇನಾ ವಾಹನಗಳ ಪೈಕಿ ಒಂದು ವಾಹನ ಅಪಘಾತಕ್ಕೀಡಾಗಿದೆ.


    ದಾರಿ ಮಧ್ಯೆ, ಝೆಮಾ ಬಳಿ ಕಡಿದಾದ ಇಳಿಜಾರಿನಲ್ಲಿ ಆಯತಪ್ಪಿದ ಸೇನಾ ವಾಹನ ಕಣಿವೆಗೆ ಉರುಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸೇನೆ ಡಿಸೆಂಬರ್ 23ರಂದು ಉತ್ತರ ಸಿಕ್ಕಿಂನ ಝೆಮಾ ಬಳಿ ಸಂಭವಿಸಿದ ಸೇನಾ ಟ್ರಕ್ ಅಪಘಾತದಲ್ಲಿ ಭಾರತೀಯ ಸೇನೆಯ 16 ಮಂದಿ ಯೋಧರು ಜೀವ ಕಳೆದುಕೊಂಡಿದ್ದಾರೆ’ ಎಂದು ತಿಳಿಸಿದೆ.

    ಸಿಕ್ಕಿಂ ರಾಜಧಾನಿ ಗ್ಯಾಂಗ್‌ಟಕ್‌ನಿಂದ 15 ಕಿ.ಮೀ ದೂರದ ಲಾಚೆನ್‌ನ ಝೆಮಾ ಬಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 16 ಮೃತದೇಹಗಳನ್ನೂ ಹೊರತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply