DAKSHINA KANNADA
ಅಂಗಡಿಗಳು ಮುಚ್ಚದೇ ವ್ಯಾಪಾರಿಗಳ ಅಸಡ್ಡೆ ಲಾಟಿ ರುಚಿ ತೋರಿಸಿದ ಪೋಲೀಸರು
ಕಡಬ ಜುಲೈ 20: ಲಾಕ್ ಡೌನ್ ವಿನಾಯಿತಿ ನಂತರವೂ ಅಂಗಡಿ ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿರುವ ಘಟನೆ ಕಡಬದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟಿ ಅಮವಾಸ್ಯೆ ಆಚರಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಹಲವು ಕಡೆಗಳಲ್ಲಿ ಲಾಕ್ ಡೌನ್ ಗೆ ಮನ್ನಣೆ ನೀಡದೇ ಜನರು ಮಾಂಸ ಮೀನು ಖರೀದಿಗೆ ಮುಗಿಬೀಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಚಿಕನ್ ಹಾಗೂ ಮಟನ್ ಸೆಂಟರ್ ಗಳಲ್ಲಿ ಬಾರೀ ಜನಜಂಗುಳಿ ಕಂಡುಬಂದಿದೆ. ಅಲ್ಲದೆ ಸಾಮಾಜಿಕ ಅಂತರ ಮಾಸ್ಕ್ ಧರಿಸದೇ ಚಿಕನ್ ಮಟನ್ ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು.
ಲಾಕ್ ಡೌನ್ ವಿನಾಯಿತಿಯ 11 ಗಂಟೆಯ ನಂತರವೂ ಅಂಗಡಿಗಳು ಬಂದ್ ಮಾಡದೇ ವ್ಯಾಪಾರಿಗಳು ವ್ಯವಹಾರ ನಡೆಸುತ್ತಿದ್ದರು. ಪೋಲೀಸರು, ಅಧಿಕಾರಿಗಳು ಅಂಗಡಿ ಬಂದ್ ಮಾಡುವಂತೆ ವಿನಂತಿ ಮಾಡಿದರೂ ಕೂಡ ವ್ಯಾಪಾರಿಗಳು,ಜನರು ಮನ್ನಣೆ ನೀಡದ ಕಾರಣ ಪೊಲೀಸರು ಹಲವರಿಗೆ ಲಾಟಿ ಪ್ರಯೋಗ ಮಾಡುವ ಅನಿವಾರ್ಯತೆ ಎದುರಾಯಿತು. ಕಡಬ, ಕಳಾರ, ಅಲಂಕಾರು ಕೋಡಿಂಬಾಳದಲ್ಲಿ ಹಲವರಿಗೆ ಲಾಟಿ ಏಟು ಬಿದ್ದಿದೆ.