Connect with us

DAKSHINA KANNADA

ಗೋ ಸಾಗಾಟ ತಡೆಯಲು ಯತ್ನಿಸಿದ ಬಜರಂಗದಳ ಕಾರ್ಯಕರ್ತರ ಮೇಲೆ ಗೋಕಳ್ಳರಿಂದ ಹಲ್ಲೆ

ಪುತ್ತೂರು ಜುಲೈ 20: ಅಮಾನುಷ ರೀತಿಯಲ್ಲಿ ಅಕ್ರಮ ಗೋ ಸಾಗಾಟ ಗೋಸಾಗಾಟ ತಡೆಯಲು ಯತ್ನಿಸಿದ ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲಾ ಎಂಬಲ್ಲಿ ನಡೆದಿದೆ.

ಲಾಕ್ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಸಾಗಾಟದ ಪರವಾನಿಗೆ ಪಡೆದ ಗೋಕಳ್ಳರು ಅಕ್ರಮವಾಗಿ ಮೂರು ಹಸು ಹಾಗೂ ಎರಡು ಕರುಗಳನ್ನು ವಾಹನದಲ್ಲಿ ಸಾಗಾಟಕ್ಕೆ ಯತ್ನಿಸಿದ್ದಾರೆ. ಮಾಹಿತಿ ತಿಳಿದ ಬಜರಂಗದಳದ ಕಾರ್ಯಕರ್ತರು ತಡೆಯಲು ಯತ್ನಿಸಿದ್ದಾರೆ. ಆದರೆ ಗೋಕಳ್ಳ ಅಟೋ ಚಾಲಕ ರಾಜೇಶ್ ಎಂಬಾತನ ತಂಡ ಬಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ.


ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಗೊಳಗಾದ ಬಜರಂಗದಳದ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಕಪ್‌ ವಾಹನದಲ್ಲಿ ಮಂಗಳೂರಿನ ಕಂಕನಾಡಿಯ ಪಿ.ಕೆ ಚಿಕನ್ ಸೆಂಟರ್ ಹೆಸರಲ್ಲಿ ಪಡೆದ ಕೋವಿಡ್-19 ಪಾಸ್ ಪತ್ತೆಯಾಗಿದೆ.