DAKSHINA KANNADA
ಕಡಬ: ಕೆರೆಗೆ ಹಾರಿ ಯುವತಿ ಆತ್ಮಹತ್ಯೆ….!!
ಪುತ್ತೂರು ಜುಲೈ 22: ಕೆರೆಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ನಡೆದಿದೆ. ಮೃತ ಯುವತಿಯನ್ನು ಕಡಬ ತಾಲೂಕಿನ ಆಲಂಕಾರು ಗ್ರಾಮದ ಪಾಂಜೋಡಿ ಕಾಲೋನಿ ನಿವಾಸಿ ಕರಿಯ ಎಂಬವರ ಪುತ್ರಿ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಈಕೆ ಶರವೂರು ಕೆರೆ ಬಳಿಕ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಇಂದು ಬೆಳಿಗ್ಗೆ ಮನೆಯ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈಗಾಗಲೇ ಕಡಬ ಪೊಲೀಸರಿಗೆ ಯುವತಿಯ ಮನೆಯವರು ದೂರು ನೀಡಿದ್ದು ,ತನಿಖೆಯ ಬಳಿಕ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ.
You must be logged in to post a comment Login