Connect with us

    LATEST NEWS

    ತುಳು ಚಿತ್ರರಂಗದ ಟ್ರೇಡ್ ಮಾರ್ಕ್ ಜ್ಯೋತಿ ಟಾಕೀಸ್ ಇನ್ನು ನೆನಪು ಮಾತ್ರ

    ಮಂಗಳೂರು : ತುಳು ಚಿತ್ರರಂಗಕ್ಕೆ ಟ್ರೇಡ್ ಮಾರ್ಕ್ ಆಗಿದ್ದ ಜ್ಯೋತಿ ಚಿತ್ರಮಂದಿರ ಇನ್ನು ನೆನಪು ಮಾತ್ರ. ಲಾಕ್ ಡೌನ್ ನಿಂದಾದಗಿ ಮುಚ್ಚಲ್ಪಟ್ಟಿದ್ದ ಈ ಥಿಯೇಟರ್ ಇನ್ನು ಮುಂದೆ ಶಾಶ್ವತವಾಗಿ ಮುಚ್ಚಲಿದೆ. ಸುಮಾರು 50 ವರ್ಷಗಳ ಸಿನಿ ರಸಿಕರನ್ನು ರಂಜಿಸುತ್ತಾ ಬಂದಿರುವ ಈ ಚಿತ್ರಮಂದಿರ ಮುಚ್ಚುತ್ತಿರುವ ಸುದ್ದಿ ಮಂಗಳೂರಿಗೆ ದುಃಖದ ಸಂಗತಿಯಾಗಿದೆ.

    ಮಂಗಳೂರಿಗರ ಹೃದಯದಲ್ಲಿ ಈ ಚಿತ್ರಮಂದಿರಕ್ಕೆ ವಿಶೇಷ ಸ್ಥಾನವಿದೆ. ವಾಸ್ತವವಾಗಿ, ನಗರದ ಹೃದಯಭಾಗದಲ್ಲಿರುವ ಈ ಪ್ರದೇಶವು (ಬಲ್ಮಠದಲ್ಲಿ) ಚಿತ್ರಮಂದಿರದಿಂದಾಗಿ ‘ಜ್ಯೋತಿ’ ಎಂಬ ಹೆಸರನ್ನು ಪಡೆಯಿತು.


    ಮೂಲಗಳ ಪ್ರಕಾರ, ಕರ್ನಾಟಕ ಥಿಯೇಟರ್ಸ್ ಯುನಿಟ್ ಲಿಮಿಟೆಡ್ ಮುಂಬೈ ಮೂಲದ ಬಿಲ್ಡರ್ ಜೊತೆ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವನ್ನು ಹಲವಾರು ವರ್ಷಗಳ ಹಿಂದೆ ಮಾಡಲಾಗಿತ್ತು ಆದರೆ ತಾಂತ್ರಿಕ ತೊಂದರೆಯಿಂದ ಇದುವರೆಗೆ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಈಗ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಚಿತ್ರಮಂದಿರ ಮುಚ್ಚಿರುವುದರಿಂದ,ಚಿತ್ರಮಂದಿರವನ್ನು ಇನ್ನೆಂದೂ ತೆರೆಯಲಾಗುವುದಿಲ್ಲ ಎಂದು ಹೇಳಲಾಗಿದೆ.. ವಾಣಿಜ್ಯ ಸಂಕೀರ್ಣದ ಕೆಲಸವು ಜನವರಿ ಅಥವಾ ಫೆಬ್ರವರಿ 2021 ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.


    ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್,ಅಂಬರೀಶ್ ಮತ್ತಿತರರು ಸೇರಿದಂತೆ ಹಲವಾರು ಸ್ಯಾಂಡಲ್ ವುಡ್ ಚಲನಚಿತ್ರ ತಾರೆಯರು ತಮ್ಮ ಚಲನಚಿತ್ರಗಳ ಬಿಡುಗಡೆಯ ಸಮಯದಲ್ಲಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು.

    ಚಿತ್ರಮಂದಿರಕ್ಕೆ 50 ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿದ್ದರೂ, ಕೆಲವು ಮಲ್ಟಿಪ್ಲೆಕ್ಸ್ ಪ್ರದರ್ಶನಗಳನ್ನು ಹೊರತುಪಡಿಸಿ ತುಳು ಚಲನಚಿತ್ರಗಳನ್ನು ಪ್ರದರ್ಶಿಸಿದ ಏಕೈಕ ಚಿತ್ರಮಂದಿರ ಇದು. ಪ್ರಾದೇಶಿಕ ಸಿನೆಮಾದ ಅಭಿಮಾನಿಗಳು ಜ್ಯೋತಿ ಟಾಕೀಸ್‌ಗೆ ಆದ್ಯತೆ ನೀಡುತ್ತಿದ್ದರು. ಇಲ್ಲಿಯವರೆಗೆ, ತುಳು ಚಲನಚಿತ್ರಗಳ ನಿರ್ಮಾಪಕರು ಜ್ಯೋತಿ ಚಿತ್ರಮಂದಿರಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿದ್ದಾರೆ.

    ಇನ್ನು ಇತ್ತೀಚೆಗೆ ಮಂಗಳೂರಿನ ಮತ್ತೊಂದು ಚಿತ್ರಮಂದಿರ ಸೆಂಟ್ರಲ್ ಸಹ ಶಾಶ್ವತವಾಗಿ ಬಾಗಿಲು ಮುಚ್ಚಿತ್ತು. ಇದೀಗ ಅದರ ಸಾಲಿಗೆ ಜ್ಯೋತಿ ಟಾಕೀಸ್ ಸಹ ಸೇರುತ್ತಿದೆ. ತುಳು ಚಿತ್ರೋದ್ಯಮದೊಂದಿಗೆ ಸಂಬಂಧ ಹೊಂದಿರುವವರಿಗೆ ಇದು ಒಂದು ಭಾವನಾತ್ಮಕ ಸಂಗತಿ.

    Share Information
    Advertisement
    Click to comment

    Leave a Reply

    Your email address will not be published. Required fields are marked *