LATEST NEWS
ಅಂಬರೀಷ್ ಅಂತ್ಯಕ್ರಿಯೆಯಲ್ಲಿ ರಮ್ಯಾ ಗೈರು ಪ್ರತಿಕ್ರಿಯಿಸಲು ಸಚಿವೆ ಜಯಮಾಲಾ ನಕಾರ

ಅಂಬರೀಷ್ ಅಂತ್ಯಕ್ರಿಯೆಯಲ್ಲಿ ರಮ್ಯಾ ಗೈರು ಪ್ರತಿಕ್ರಿಯಿಸಲು ಸಚಿವೆ ಜಯಮಾಲಾ ನಕಾರ
ಉಡುಪಿ ನವೆಂಬರ್ 30: ಹಿರಿಯ ನಟ ಮಾಜಿ ಸಚಿವ ಅಂಬರೀಷ್ ಅವರ ಅಂತ್ಯ ಕ್ರಿಯೆಯಲ್ಲಿ ಕಾಂಗ್ರೇಸ್ ಯುವ ನಾಯಕಿ ರಮ್ಯಾ ಗೈರು ಹಾಜರಿ ಬಗ್ಗೆ ಪ್ರತಿಕ್ರಿಯಿಸಲು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ನಿರಾಕರಿಸಿದರು.
ಅಂಬರೀಷ್ ಅಂತ್ಯಸಂಸ್ಕಾರದಲ್ಲಿ ರಮ್ಯಾ ಅನುಪಸ್ಥಿ ಬಗ್ಗೆ ಕೇಳಿದ್ದಕ್ಕೆ ‘sorry’ ಎಂದು ಸಚಿವೆ ಜಯಮಾಲಾ ಪ್ರತಿಕ್ರಿಯಿಸಿದರು. ನಂತರ ಮಾತನಾಡಿದ ಅವರು ರಮ್ಯಾ ಅವರು ಅಂಬರೀಶ್ ಅವರ ವೈಕುಂಠ ಸಮಾರಾಧನೆಗೆ ಬರಬಹುದು ಎಂದರು.

ಅಂಬರೀಷ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಕ್ಕೆ ಇರುವುದಕ್ಕೆ ರಮ್ಯಾ ಹುಷಾರಿಲ್ಲ ಅಂತ ಹೇಳ್ಕೊಂಡಿದಾರಲ್ವಾ, ಬೇರೇನೂ ರಾಜಕೀಯ ಕಾರಣ ಇರ್ಲಿಕ್ಕಿಲ್ಲ ಅಲ್ಲದೆ ಹೆಣ್ಮಕ್ಕಳಿಗೆ ಹಲವಾರು ತೊಂದರೆ ಇರುತ್ತೆ ಎಂದು ಜಯಮಾಲಾ ಹೇಳಿದರು.