PUTTUR
ಸುಬ್ರಹ್ಮಣ್ಯ ಮಠದ ವಿರುದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ RTC ತಿದ್ದುಪಡಿ ಆರೋಪ
ಸುಬ್ರಹ್ಮಣ್ಯ ಮಠದ ವಿರುದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ RTC ತಿದ್ದುಪಡಿ ಆರೋಪ
ಪುತ್ತೂರು ನವೆಂಬರ್ 30: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಸಂಪುಟ ನರಸಿಂಹ ಮಠದ ನಡುವಿನ ತಿಕ್ಕಾಟ ಹೆಚ್ಚಾಗುತ್ತಿದ್ದು, ಇದೀಗ ಮಠದ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ.
ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದ ಪಹಣಿ ಪತ್ರದಲ್ಲಿ ತಿದ್ದುಪಡಿ ಮಾಡಿದ ಆರೋಪ ಇದೀಗ ಮಠದ ಮೇಲಿದೆ. ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದ ವಿಸ್ತೀರ್ಣ 1.33 ಎಕರೆಯಾಗಿದ್ದು ಸುಬ್ರಹ್ಮಣ್ಯ ಗ್ರಾಮದ ಸರ್ವೆ ನಂಬರ್ 82/1 ರಲ್ಲಿ ಈ ಭೂಮಿಯಿದೆ.
ದಾಖಲೆ ಪ್ರಕಾರ ಕಲಂ 9 ರಲ್ಲಿ ಸ್ವಾಧೀನದ ಹೆಸರು ಸರಕಾರ ಎಂದಿದ್ದು, ಕಲಂ 11 ರಲ್ಲಿ ಪೋರಂ ದೇವಸ್ಥಾನ ಎಂದಿದೆ. ಆದರೆ ಇದೀಗ ಮಠದ ವತಿಯಿಂದ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ರಿಟ್ ಪಿಟಿಷನ್ ನಲ್ಲಿ ಈ ದಾಖಲೆಯನ್ನು ತಿದ್ದಿರುವ ಅಂಶ ದೇವಸ್ಥಾನದ ಗಮನಕ್ಕೆ ಬಂದಿದೆ.
ದೇವಸ್ಥಾನದ ಒಳಾಂಗಣದಲ್ಲಿರುವ ಈ ಜಾಗವನ್ನು ಇದೀಗ ಸುಬ್ರಾಯ ದೇವಸ್ಥಾನ, ನರಸಿಂಹ ಮಠ, ಉಮಾಮಹೇಶ್ವರಿ, ಕಾಳಿ ಹೀಗೆ ವಿಂಗಡಿಸಿ ಬದಲಾಯಿಸಲಾಗಿದೆ. ಸುಳ್ಯ ತಹಶಿಲ್ದಾರ್ ಮೂಲಕವೇ ಈ ತಿದ್ದುಪಡಿ ನಡೆದಿದ್ದು, ಜಾಗದ ವಾರೀಸುದಾರರಾದ ಸುಬ್ರಹ್ಮಣ್ಯ ದೇವಸ್ಥಾನದ ಗಮನಕ್ಕೆ ತರದೇ ಈ ಬದಲಾವಣೆಗಳನ್ನು ಮಾಡಲಾಗಿದೆ.
ಈ ಸಂಬಂಧ ಸಂಪುಟ ನರಸಿಂಹ ಮಠದ ವಿರುದ್ಧ ಪಹಣಿ ಪತ್ರದಲ್ಲಿ ತಿದ್ದುಪಡಿ ಮಾಡಿದ ಆರೋಪವನ್ನು ಹೊರಿಸಲಾಗಿದೆ.ಈ ಕುರಿತು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧಾರ್ಮಿಕ ದತ್ತಿ ಇಲಾಖೆಗೆ ಹಾಗೂ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
Facebook Comments
You may like
ಬ್ಯಾಂಕ್ ಗಳಿಗೆ ವಂಚನೆ – ಉದ್ಯಮಿ ಬಿ.ಆರ್ ಶೆಟ್ಟಿಯ ಪ್ರಪಂಚಾದ್ಯಂತ ಇರುವ ಆಸ್ತಿಗಳ ಮುಟ್ಟುಗೋಲಿಗೆ ಲಂಡನ್ ಕೋರ್ಟ್ ಸೂಚನೆ
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
ನಕಲಿ ಪತ್ರಕರ್ತರಿಗೆ ಉಡುಪಿಯಲ್ಲಿ ಬಿತ್ತು ಧರ್ಮದೇಟು
ಒಎಲ್ಎಕ್ಸ್ನಲ್ಲಿ ಸೊತ್ತು ಮಾರಲು ಹೋದ ವ್ಯಕ್ತಿಗೆ 16 ಸಾವಿರ ಪಂಗನಾಮ!
ಅನಿಲ್ ಅಂಬಾನಿ ಬ್ಯಾಂಕ್ ಗಳಿಗೆ ನೀಡಬೇಕಾಗಿರುವ ಹಣವೇ 86 ಸಾವಿರ ಕೋಟಿ..
ಚಂಪಾಷಷ್ಠಿ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಂತರ್ರಾಜ್ಯ ಮತ್ತು ಅಂತರ್ ಜಿಲ್ಲಾ ಭಕ್ತಾಧಿಗಳಿಗೆ ನಿರ್ಬಂಧ!
You must be logged in to post a comment Login