FILM
ಹಿರಿಯ ನಟಿ ಜಯಾ ಬಚ್ಚನ್ ಸಿರಿವಂತ ಸಂಸದೆ..!!

ನವದೆಹಲಿ, ಮಾರ್ಚ್ 14 : ರಾಜ್ಯಸಭೆ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಜಯಾ ಬಚ್ಚನ್ ಅವರೇ ಅತಿ ಶ್ರೀಮಂತ ಸಂಸದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಆಸ್ತಿಯ ಒಟ್ಟು ಮೌಲ್ಯ 1,000 ಕೋಟಿ ರೂ.
ಇದು ಗಾಸಿಪ್ ಅಲ್ಲ. ಸ್ವತ ಅವರು ತಮ್ಮ ಅಫಿಡವಿಟ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ.

ಈ ಮೂಲಕ ಶ್ರೀಮಂತ ಸಂಸದ ಎಂಬ ಹೆಸರು ಗಳಿಸಿದ್ದ ಬಿಜೆಪಿಯ ರವೀಂದ್ರ ಕಿಶೋರ್ ಸಿನ್ಹಾರನ್ನು ಜಯಾ ಮೀರಿಸಿದ್ದಾರೆ.
2014ರ ಅಫಿಡವಿಟ್‌ನಲ್ಲಿ ಕಿಶೋರ್ ಸಿನ್ಹಾರ ಆಸ್ತಿ 800 ಕೋಟಿ ರೂ. ಆಗಿತ್ತು.
ಜಯಬಚ್ಚನ್ ಅವರ ಆಸ್ತಿ ವಿವರ ಹೀಗಿದೆ :
ಅಮಿತಾಭ್-ಜಯಾ ಅವರಲ್ಲಿರುವ ಆಭರಣಗಳ ಮೌಲ್ಯ : 62 ಕೋಟಿ
ಜಯಾ ಬಚ್ಚನ್‌ರ ಕೃಷಿ ಭೂಮಿ : 1.22 ಕೋಟಿ
ಅಮಿತಾಭ್‌ರ ಕೃಷಿ ಭೂಮಿ : 03 ಎಕರೆ (5.7 ಕೋಟಿ ರೂ.)
ವಾಚ್‌ಗಳ ಮೌಲ್ಯ :3.9 ಕೋಟಿ
ಜಯಾ ಅವರ ಪೆನ್ ಮೌಲ್ಯ : 09 ಕೋಟಿ
ಎಲ್ಲೆಲ್ಲಿ ಇವೆ ಆಸ್ತಿಗಳು ?
ಫ್ರಾನ್ಸ್‌ನ ಬ್ರಿಗ್ನೊಗನ್ ಪ್ಲೇಗ್, ಭಾರತದ ನೋಯ್ಡಾ, ಭೋಪಾಲ್, ಪುಣೆ, ಅಹಮದಾಬಾದ್ ಮತ್ತು ಗಾಂಧಿನಗರ
ಬಚ್ಚನ್ ದಂಪತಿ ಆಸ್ತಿಪಾಸ್ತಿ 2012 2018
ಒಟ್ಟು ಆಸ್ತಿ ಮೌಲ್ಯ 493 ಕೋಟಿ ರೂ. 1,000 ಕೋಟಿ ರೂ.
ದಂಪತಿಯ ಸ್ಥಿರಾಸ್ತಿ 152 ಕೋಟಿ ರೂ. 460 ಕೋಟಿ ರೂ.
ಚರಾಸ್ತಿ 343 ಕೋಟಿ ರೂ. 540 ಕೋಟಿ ರೂ.
ಇದಲ್ಲದೇ ಬಚ್ಚನ್ ದಂಪತಿಗಳತ್ರ
ರೋಲ್ಸ್ ರಾಯ್ಸ, ಮರ್ಸಿಡಿಸ್, ಒಂದು ಪೊರ್ಷ್, ಒಂದು ರೇಂಜ್ ರೋವರ್, ಟಾಟಾ ನ್ಯಾನೋ ಮತ್ತು ಒಂದು ಟ್ರ್ಯಾಕ್ಟರ್ ಹೀಗೇ 12 ಒಟ್ಟು ವಾಹನಗಳಿದ್ದು ಅವುಗಳ ಮೌಲ್ಯ 13 ಕೋಟಿ ರೂ. ಆಗಿದೆ.