FILM
ನ್ಯೂರೋ ಎಂಡೋಕ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವುದು ಸತ್ಯ : ನಟ ಇರ್ಫಾನ್ ಖಾನ್
ಮುಂಬೈ,ಮಾರ್ಚ್ 17 : ಇತ್ತೀಚಿಗಷ್ಟೇ ತಾವು ತಾನು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಆ ಅಪರೂಪದ ಕಾಯಿಲೆ ಯಾವುದು ಎಂಬುದನ್ನು ಶುಕ್ರವಾರ ಬಹಿರಂಗಪಡಿಸಿದ್ದಾರೆ.
ನನಗೆ ಬಂದಿರುವ ಕಾಯಿಲೆ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಎಂದು ತಿಳಿದು ಬಂದಿರುವುದಾಗಿ ಇರ್ಫಾನ್ ಖಾನ್ ಅವರು ಇಂದು ಟ್ವೀಟ್ ಮಾಡಿದ್ದಾರೆ.
ಈ ಮೂಲಕ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈ ಹಿಂದೆ ಮಾರ್ಚ್ 5ರಂದು ಟ್ವೀಟ್ ಮಾಡಿದ್ದ ಇರ್ಫಾನ್ ಖಾನ್, ತಾನು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು,
ಅದರ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿ ಹಾಗೂ ತನ್ನ ಆರೋಗ್ಯ ಸ್ಥಿತಿಯ ಬಗ್ಗೆ ಊಹಾಪೋಹ ಸೃಷ್ಟಿಸದಂತೆ ಮನವಿ ಮಾಡಿದ್ದರು.
ನಾವು ಅನಿರೀಕ್ಷಿತ ಬೆಳವಣಿಗೆ ನನ್ನ ಬೆಳವಣಿಗೆಗೆ ಸಹಕಾರಿಯಾಗಿದೆ ಎಂಬುದನ್ನು ನಾನು ಇತ್ತೀಚಿಗೆ ಅರಿತಿದ್ದೇನೆ.
ನನಗೆ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಇದೆ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟಕರವಾಗಿದೆ.
ಆದರೆ ನನ್ನ ಸುತ್ತಮುತ್ತ ಇರುವವರ ಪ್ರೀತಿ, ಧೈರ್ಯ ಮತ್ತು ನನ್ನೊಳಗಿರುವ ಪ್ರೀತಿ ಮತ್ತು ಧೈರ್ಯ ನನಗೆ ಭರವಸೆಯನ್ನು ನೀಡಿದೆ.
ಈ ಪಯಣ ನನ್ನನ್ನು ದೇಶದಿಂದ ಹೊರಗೆ ಕರೆದೊಯ್ದಿದೆ.
ನಿಮ್ಮ ಹಾರೈಕೆಗಳು ಸದಾ ಹೀಗೆ ಇರಲಿ ಎಂದು ಮನವಿ ಮಾಡುತ್ತೇನೆ.
ನಾನು ಮತ್ತೆ ಹೊಸ ಕಥೆಗಳೊಂದಿಗೆ ಬರುತ್ತೇನೆ ಎಂಬ ಆಶಾಭಾವನೆ ಇದೆ ಎಂದು ನಟ ಟ್ವೀಟ್ ಮಾಡಿದ್ದಾರೆ.
You must be logged in to post a comment Login