Connect with us

FILM

ತಿರುಪತಿ ತಿರುಮಲದಲ್ಲಿ ನಟಿ ಜಾನ್ವಿ ಕಪೂರ್

ತಿರುಪತಿ : ಸದಾ ಹಾಟ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಾಲಿವುಡ್ ನಟಿ ಜಾನ್ವಿ ಕಪೂರ್ ಇದೀಗ ಲಂಗಾ ದಾವಣಿಯಲ್ಲಿ ಕಾಣಿಸುಕೊಂಡು ಅಭಿಮಾನಿಗಳ ಹುಬ್ಬೆರಿಸಿದ್ದಾರೆ. ಸಿನೆಮಾಗಳ ಶೂಟಿಂಗ್ ಗೆ ಬ್ರೇಕ್ ಹಾಕಿ ತಿರುಪತಿ ತಿರುಮಲಕ್ಕೆ ಭೇಟಿ ನೀಡಿರುವ ಜಾನ್ವಿ ಕಪೂರ್ ಪಕ್ಕಾ ತೆಲುಗು ಹುಡುಗಿಯಂತೆ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ದಕ್ಷಿಣ ಭಾರತದ ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್, ಚಿತ್ರೀಕರಣ ಬ್ರೇಕ್ ನೀಡಿ,ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ. ಸದಾ ಮಾಡರ್ನ್ ಲುಕ್‌ನಲ್ಲಿ ಕಂಗೊಳಿಸುತ್ತಿದ್ದ ನಟಿ ಜಾನ್ವಿ, ಇದೀಗ ತಿರುಪತಿಯಲ್ಲಿ ತೆಲುಗಿನ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಟ್ರಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.


ಜಾನ್ವಿ ಕಪೂರ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಜೊತೆಗೆ ಇದೀಗ ದಕ್ಷಿಣ ಸಿನಿಮಾಗಳಲ್ಲೂ ಮಿಂಚಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೌತ್ ಸಿನಿರಂಗದಲ್ಲಿ ಅದ್ಯಾವ ಹೀರೋ ತೆರೆಹಂಚಿಕೊಳ್ಳಬಹುದು ಅಂತಾ ಕಾದುನೋಡಬೇಕಿದೆ.

Advertisement
Click to comment

You must be logged in to post a comment Login

Leave a Reply