Connect with us

FILM

ಬೆಲ್ಲಿ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ ಕಪೂರ್…!!

ಮುಂಬೈ: 80-90 ರ ದಶಕದಲ್ಲಿ ಯುವಕರ ನಿದ್ದೆಗೆಡಿಸಿದ ಬಾಲಿವುಡ್ ತಾರೆ ಶ್ರೀದೇವಿಯವರ ಮಗಳು ಜಾಹ್ನವಿ ಕಪೂರ್ ಕೂಡ ಈಗ ಅಮ್ಮನ ಹಾದಿ ಹಿಡಿದಿದ್ದು, ತನ್ನ ಬೆಲ್ಲಿ ಡ್ಯಾನ್ಸ್ ಮೂಲಕ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದಾರೆ.


ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ಅದ್ಬುತ ನೃತ್ಯಗಾರ್ತಿ. ತಾಯಿಯ ನೃತ್ಯ ಕೌಶಲ್ಯಗಳನ್ನು ಬಳುವಳಿಯಾಗಿ ಪಡೆದ ರೀತಿ ಅವರ ಪುತ್ರಿ ಜಾಹ್ನವಿ ಕಪೂರ್ ಈಗ ತನ್ನ ಬೆಲ್ಲಿ ಡ್ಯಾನ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.


ಇನ್ಸ್ಟಾಗ್ರಾಮಲ್ಲಿ ಜಾಹ್ನವಿ ನೃತ್ಯದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಅಶೋಕ ಚಿತ್ರದ ಸನ್ ಸನನಾ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡುವುದನ್ನು ಕಾಣಬಹುದು. ಹಾಡಿನ ಮೂಲ ವಿಡಿಯೋದಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದರು. ಈ ಗೀತೆಯನ್ನು ಅಲ್ಕಾ ಯಾಗ್ನಿಕ್ ಮತ್ತು ಹೇಮಾ ಸರ್ದೇಸಾಯಿ ಹಾಡಿದ್ದಾರೆ


ಹಾಡಿಗೆ ತಕ್ಕಂತೆ ಮನೋಹರವಾಗಿ ನೃತ್ಯ ಮಾಡಿರುವ ಜಾಹ್ನವಿ, ಬೆಲ್ಲಿ ಡ್ಯಾನ್ಸ್‌ನ ತಾಂತ್ರಿಕ ಅಂಶಗಳಲ್ಲಿ ತನ್ನ ಪರಿಪೂರ್ಣತೆಯನ್ನು ಪ್ರದರ್ಶಿಸಿದ್ದಾರೆ. ಬಿಳಿ ಉಡುಪನ್ನು ತೊಟ್ಟು ಜಾಹ್ನವಿ ಕಪೂರ್ ಬೆಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.