Connect with us

FILM

ದುಬೈ ಮರಳುಗಾಡಿನಲ್ಲಿ ಹಾಟ್ ಅವತಾರದಲ್ಲಿ ನಟಿ ಜಾಹ್ನವಿ ಕಪೂರ್

ದುಬೈ : ಹಿಂದಿ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ಮಕ್ಕಳಾದ ನಟಿ ಜಾಹ್ನವಿ ಕಪೂರ್ ಹಾಗೂ ಆಕೆಯ ಸಹೋದರಿ ಖುಷಿ ಕಪೂರ್ ದುಬೈ ಪ್ರವಾಸದಲ್ಲಿದ್ದು, ದುಬೈನ ಮೋಜು ಮಸ್ತಿಗಳ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ.


ದುಬೈನಲ್ಲಿ ಸಹೋದರಿ ಖುಷಿ ಕಪೂರ್ ಜೊತೆಗೆ ಡೆಸರ್ಟ್ ಸಫಾರಿ ಮಾಡಿ ಸಖತ್ ಎಂಜಾಯ್ ಮಾಡಿದ್ದ ಜಾನ್ವಿ ಕಪೂರ್ ಇದೀಗ ಕಡಲ ತೀರದಲ್ಲಿ ಬಿಕಿನಿ ತೊಟ್ಟು ಸಖತ್ ಹಾಟ್ ಆ್ಯಂಡ್ ಬೋಲ್ಡ್ ಲುಕ್‍ನಲ್ಲಿ ಮಿಂಚಿದ್ದಾರೆ.

ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಅದರಲ್ಲೂ ಕಪೂರ್ ಸಹೋದರಿಯರು ದುಬೈ ಮರುಭೂಮಿಯಲ್ಲಿ ಸಫಾರಿ ಅನುಭವ ಪಡೆದುಕೊಂಡಿರುವುದನ್ನು ಹೇಳಿಕೊಂಡಿದ್ದಾರೆ.


ಈ ಫೋಟೋಗಳನ್ನು ಜಾನ್ವಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಫೋಟೋ ಜೊತೆಗೆ ಲುಂಗಿ ಡ್ಯಾನ್ಸ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.


ಕಡಲ ತೀರದ ಕತ್ತಲಿನಲ್ಲಿ ಜಾನ್ವಿ, ಖುಷಿ ಜೊತೆಗೆ ಬಿಕಿನಿಯಲ್ಲಿ ಫೋಟೋಗೆ ಪೋಸ್ ನೀಡಿರುವುದನ್ನು ಹಾಗೂ ಸಮುದ್ರದ ನೀರಿನಲ್ಲಿ ಆಟ ಆಡಿರುವುದನ್ನು, ವಾಟರ್ ಬೈಕ್ ರೈಡ್ ಮಾಡಿರುವುದನ್ನು ಕಾಣಬಹುದಾಗಿದೆ.