ಕರಾವಳಿಯಲ್ಲಿ ಭಾರಿ ಚರ್ಚೆಯಲ್ಲಿರುವ ಜನಾರ್ಧನ ಪೂಜಾರಿಯವರ ಮಹಾಪ್ರತಿಜ್ಞೆ

ಮಂಗಳೂರು ಮೇ 24: ಮಾಜಿ ಕೇಂದ್ರ ಸಚಿವ ಕಾಂಗ್ರೇಸ್ ನ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿಯವರ ಪ್ರತಿಜ್ಞೆ ಈಗ ಕರಾವಳಿಯಲ್ಲಿ ಬಾರಿ ಚರ್ಚೆಯಲ್ಲಿದೆ. ತಮ್ಮ ಖಡಕ್ ಮಾತಿನಿಂದ ಕಾಂಗ್ರೇಸ್ ಗೆ ಇರುಸು ಮುರುಸು ತರುತ್ತಿದ್ದ ಪೂಜಾರಿಯವರು ಈಗ ತಾವು ಆಡಿದ ಮಾತೆ ಅವರಿಗೆ ಮುಳ್ಳಾಗಿ ಪರಿಣಮಿಸಿದೆ.

ಲೋಕಸಭಾ ಚುನಾವಣಾ ಪ್ರಚಾರ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಗೆಲ್ಲದಿದ್ದರೆ ಕುದ್ರೋಳಿ ದೇವಸ್ಥಾನಕ್ಕೆ ಹೋಗೋದಿಲ್ಲ ಎಂದು ಜನಾರ್ದನ ಪೂಜಾರಿ ಚುನಾವಣಾ ಜೋಷ್ ನಲ್ಲಿ ಆಡಿದ ಮಾತು ಧರ್ಮಸಂಕಷ್ಟಕ್ಕೆ ಸಿಲುಕಿಸಿದೆ.

ಮಂಗಳೂರು ಕುದ್ರೋಳಿ ದೇವಸ್ಥಾನದ ರೂವಾರಿ ಬಿ. ಜನಾರ್ಧನ ಪೂಜಾರಿ, ಹಳೆಯ ದೇವಸ್ಥಾನವನ್ನು ಈಗಿನ ಮಟ್ಟಕ್ಕೆ ತರುವಲ್ಲಿ ಜನಾರ್ಧನ ಪೂಜಾರಿಯವರ ಶ್ರಮ ಬಹಳಷ್ಟು ಇದೆ.

ಕುದ್ರೋಳಿಯಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟು ದೇಶದಾದ್ಯಂತ ಸಂಚಲನ ಮೂಡಿಸಿದ್ದರು. ಬಹುತೇಕ ಕುದ್ರೋಳಿ ದೇವಸ್ಥಾನ ಎಂದರೆ ಜನಾರ್ಧನ ಪೂಜಾರಿ ಎನ್ನುವಷ್ಟರ ಮಟ್ಟಿಗೆ ನಂಟು.

ಮಾತು ಆಡಿದರೆ ಹೋಯ್ತು ಮುತ್ತು ಹೊಡೆದರೆ ಹೋಯ್ತು ಎಂಬ ಮಾತಿದೆ.ಈ ಮಾತು ಸದ್ಯ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಯವರಿಗೆ ಸರಿಯಾಗಿ ಅನ್ವಯವಾಗುತ್ತೆ .

ಮಾರ್ಚ್ 25 ರಂದು ಮಿಥುನ್ ರೈ ನಾಮಪತ್ರ ಸಲ್ಲಿಕೆಗೆ ಮೊದಲು ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಕುದ್ರೋಳಿ ದೇವಾಲಯದ ಹೆಸರು ಮುಂದಿಟ್ಟು ಪೂಜಾರಿ ಮಹಾಪ್ರತಿಜ್ಞೆ ಮಾಡಿದ್ದರು.

ಮಿಥುನ್ ಗೆಲ್ಲದಿದ್ದರೆ ಕುದ್ರೋಳಿ ಕ್ಷೇತ್ರ ಮಾತ್ರವಲ್ಲದೆ,ಚರ್ಚ್ ಮಸೀದಿಗಳಿಗೂ ಕಾಲಿಡಲ್ಲ ಎಂದು ಹೇಳಿದ್ದರು..ಆದರೆ ಜಿಲ್ಲೆಯ ಮತದಾರ ಪೂಜಾರಿ ಕೈ ಹಿಡಿಯದೆ,ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ರನ್ನು ಗೆಲ್ಲಿಸಿದ್ದು,ಜನಾರ್ದನ ಪೂಜಾರಿ ಗೆ ಭಾರೀ ಮುಖಭಂಗವಾಗಿದೆ
ಕೇಂದ್ರ ಸಚಿವರಾಗಿದ್ದಾಗ ಜೀರ್ಣಾವಸ್ಥೆಯಲ್ಲಿದ್ದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಅಂತರಾಷ್ಟ್ರೀಯ ಮಟ್ಟದ ಖ್ಯಾತಿ ತಂದು ಕೊಟ್ಟವರು ಜನಾರ್ದನ ಪೂಜಾರಿ..ಅಂದಿನಿಂದ ಇಂದಿನವರೆಗೂ ಮಂಗಳೂರು ದಸರಾ ಸೇರಿದಂತೆ ಕ್ಷೇತ್ರದ ಪ್ರತಿ ಯೊಂದು ಅಭಿವೃದ್ಧಿ ಕೆಲಸವೂ ಪೂಜಾರಿ ನೇತೃತ್ವದಲ್ಲೇ ನಡೆಯುತ್ತಿದೆ.ಇಷ್ಟೆಲ್ಲಾ ಮಾಡಿದ ಪೂಜಾರಿ ದೇವಸ್ಥಾನಕ್ಕೆ ಬರಲೇ ಬೇಕು ಎನ್ನುವುದು ಕ್ಷೇತ್ರದ ಆಡಳಿತ ಮಂಡಳಿ ಮತ್ತು ಭಕ್ತರ ಅಭಿಪ್ರಾಯವಾಗಿದೆ..ಆದ್ರೆ ಮಾತು ತಪ್ಪದ ಪೂಜಾರಿ ಆಡಿದ ಮಾತು ಉಳಿಸುತ್ತಾರಾ ಎಂಬುವುದು ಕುತೂಹಲ ಕೆರಳಿಸಿದೆ.

ಆದರೆ ಜನಾರ್ದನ ಪೂಜಾರಿಯನ್ನು ಮತ್ತೆ ಕ್ಷೇತ್ರದ ಕರೆತರಲು ಪೂಜಾರಿ ಆಪ್ತರು ಪ್ರಯತ್ನ ನಡೆಸುತ್ತಿದ್ದಾರೆ.ಪೂಜಾರಿ ಆಪ್ತ ಹರಿಕೃಷ್ಣ ಬಂಟ್ವಾಳ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಜನಾರ್ದನ ಪೂಜಾರಿಯವರ ಮನೆಗೆ ಹೋಗಿ ಮನವೊಲಿಸಲು ತೀರ್ಮಾನಿಸಿದ್ದು,ಮತ್ತೆ ಕ್ಷೇತ್ರಕ್ಕೆ ತರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

VIDEO

Facebook Comments

comments