LATEST NEWS
ಜಾಮರ್ ಸಮಸ್ಯೆ ಬಗೆಹರಿಯದಿದ್ದರೆ ಏಪ್ರಿಲ್ 4 ರಂದು ಜೈಲಿಗೆ ನುಗ್ಗಿ ಜಾಮರ್ ಕಿತ್ತು ಬಿಸಾಕುತ್ತೇವೆ – ಶಾಸಕ ಕಾಮತ್ ವಾರ್ನಿಂಗ್

ಮಂಗಳೂರು ಎಪ್ರಿಲ್ 01: ಮಂಗಳೂರಿನ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್ ಜಾಮರ್‌ನಿಂದಾಗಿ ಸಾರ್ವಜನಿಕರಿಗೆ ವಿಪರೀತ ತೊಂದರೆಯಾಗುತ್ತಿದ್ದು ಸಂಬಂಧಪಟ್ಟವರು ನಮ್ಮ ಯಾವುದೇ ಮನವಿಗೂ ಸ್ಪಂದಿಸುತ್ತಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಮೊಬೈಲ್ ಜಾಮರ್ ನಿಂದಾಗುತ್ತಿರುವ ಸಮಸ್ಯೆ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಮಂಗಳೂರು ಜೈಲಿಗೆ ಯಾಕೆ ಮೊಬೈಲ್ ಜಾಮರ್ ಎಂದು ಪ್ರಶ್ನಿಸಿದ ಅವರು ಜೈಲಿನಲ್ಲಿ ಖೈದಿಗಳಿಗೆ ಮೊಬೈಲ್ ನೀಡುವವರು ಯಾರು ಎಂದು ಪ್ರಶ್ನಿಸಿದರು. ಕಾಂಗ್ರೇಸ್ ಸರಕಾರ ಬಂದ ನಂತರ ಜೈಲಿನಲ್ಲಿರುವ ಖೈದಿಗಳಿಗೂ ತಪ್ಪು ಮಾಡ್ಲಿಕೆ ಧೈರ್ಯ ಬಂದಿದೆ . ಆಡಳಿತ ಪಕ್ಷ ಕಾಂಗ್ರೇಸ್ ಘನಘೋರ ತಪ್ಪು ಮಾಡಿರುವವರ ಕೇಸ್ ಗಳನ್ನು ವಾಪಾಸ್ ಪಡೆದಿದ್ದಾರೆ.

ಜೈಲಿನ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ಮಾಡಲು ಕಾಂಗ್ರೇಸ್ ನೇತೃತ್ವದ ಮಂತ್ರಿಗಳು ಮತ್ತು ಆಡಳಿತ ವ್ಯವಸ್ಥೆ ಬೀಡುತ್ತಿಲ್ಲ ಎಂದು ಆರೋಪಿಸಿದರು. ಸಮಸ್ಯೆ ಬಗೆಹರಿಸಲು ಜೈಲಿನ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಇದೆ ಈ ಹಿನ್ನಲೆ ಏಪ್ರಿಲ್ 3 ರ ರೊಳಗೆ ಜೈಲಿನ ಜಾಮರ್ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಏಪ್ರಿಲ್ 4 ನೇ ತಾರೀಕಿನಂದು ಸಾರ್ವಜನಿಕರ ಪರವಾಗಿ ಬಿಜೆಪಿ ಕಾರ್ಯಕರ್ತರೆಲ್ಲರೂ ಸೇರಿಕೊಂಡು ರಾಸ್ತಾ ರೋಕೋ ನಡೆಸಿ, ಜೈಲಿನೊಳಗೆ ನುಗ್ಗಿ ಜಾಮರ್ ಕಿತ್ತು ಬಿಸಾಕ ಬೇಕಾಗುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆ ನೀಡಿದ್ದಾರೆ.