LATEST NEWS
ಸಿನೆಮಾ ಸ್ಟೈಲ್ ನಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಪರಾರಿಯಾದ ಕಳ್ಳ
ಸಿನೆಮಾ ಸ್ಟೈಲ್ ನಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಪರಾರಿಯಾದ ಕಳ್ಳ
ಮಂಗಳೂರು ನವೆಂಬರ್ 9 : ಸಿನಿಮಿಯ ರೀತಿಯಾಗಿ ಕಳ್ಳನೊಬ್ಬ ಪೊಲೀಸರಿಗೆ ಚಳ್ಳಹಣ್ಣ ತಿನ್ನಿಸಿ ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪರಾರಿಯಾದ ಕೈದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ನಿವಾಸಿ ಮಹಮ್ಮದ್ ರಫೀಕ್ ಎಂದು ಗುರುತಿಸಲಾಗಿದೆ.
ಮಹಮ್ಮದ್ ರಫೀಕ್ ಮೇಲೆ ದಕ್ಷಿಣ ಕನ್ನಡ ಹಾಗೂ ಹೊರ ಜಿಲ್ಲೆಗಳು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. 2016ರಲ್ಲಿ ನಡೆದ ಸರಕಳ್ಳತನ ಪ್ರಕರಣದಲ್ಲಿ ಮಹಮ್ಮದ್ ರಫೀಕ್ ನನ್ನು ಬಂಧಿಸಿ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿರಿಸಲಾಗಿತ್ತು.
ಈತ 2015ರಲ್ಲಿ ವೇಣೂರು ಬಸದಿ ಕಳವು ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದ. ವೇಣೂರು ಬಸದಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ0ತೆ ರಫೀಕ್ ನ್ನು ನಾಳೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲು ವೇಣೂರು ಪೊಲೀಸರು ಇಂದು ಮಂಗಳೂರು ಜೈಲಿಗೆ ಬಾಡಿ ವಾರಂಟ್ ನೊಂದಿಗೆ ಆಗಮಿಸಿದ್ದರು.
ಇಂದು ಸಂಜೆ ವೇಣೂರು ಠಾಣೆಯ ಇಬ್ಬರು ಪೊಲೀಸರು ವಿಚಾರಣಾಧೀನ ಕೈದಿ ಮಹಮ್ಮದ್ ರಫೀಕ್ ನನ್ನು ಮಂಗಳೂರು ಜೈಲಿನಿಂದ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ, ಸಿನೀಮಿಯ ರೀತಿಯಲ್ಲಿ ಮೊದಲೇ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದ ಕೈದಿ ಮಹಮ್ಮದ್ ರಫೀಕ್ ಜೈಲಿನಿಂದ ಹೊ ಬರುತ್ತಿದ್ದಂತೆ ಅನಾತಿ ದೂರದಲ್ಲಿ ಜೊತೆಗೆ ಇದ್ದ ಪೊಲೀಸರನ್ನು ದೂಡಿ ಅಲ್ಲೇ ಪರಾರಿಯಾಗಲು ಸಹಾಯಕ್ಕೆ ಬಂದಿದ್ದ ಬೈಕ್ ಒಂದರಲ್ಲಿ ಏರಿ ಎಸ್ಕೇಪ್ ಆಗಿದ್ದಾನೆ. ಕ್ಷಣಮಾತ್ರದಲ್ಲಿ ಈ ಘಟನೆ ನಡೆದು ಹೋಗಿದೆ.ತಪ್ಪಿಸಿಕೊಂಡ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದು, ನಗರದಾದ್ಯಂತ ನಾಕಾಬಂದಿ ನಡೆಸಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ