ಅಯೋಧ್ಯೆ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ -ಮಾಜಿ ಪ್ರಧಾನಿ ದೇವೇಗೌಡ

ಮಂಗಳೂರು ನವೆಂಬರ್ 9: ಅಯೋಧ್ಯೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ವಾಗತಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಬಾಬರಿ ಮಸೀದಿಯನ್ನು ಒಡೆದಿದ್ದು ತಪ್ಪು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಬಂಧಿತ ಆರೋಪಿಗಳು ಖುಲಾಸೆಯಾಗಿದ್ದಾರೆ. ಮಸೀದಿಯನ್ನು ಒಡೆದದ್ದು ತಪ್ಪು ಅಂದ ಮೇಲೆ ಅವರಿಗೆ ಪರಿಹಾರ ಕೊಡಬೇಕಿತ್ತು.ಈ ಹಕ್ಕಿಗಾಗಿ ಹೋರಾಟ ಮಾಡಿದವರು ಹಾಗೂ ಅವರ ನೊಂದ ಸಮುದಾಯಕ್ಕೆ ಪರಿಹಾರ ಕೊಡಬೇಕಿತ್ತು.

ಪರಿಹಾರ ಕೊಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬಹುದಿತ್ತು. ಆದ್ರೆ ಇದ್ಯಾವುದರ ಬ್ಗಗೆಯೂ ಚರ್ಚೆ ಆಗಿಲ್ಲ. ಆದರೂ ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ದೇವೇಗೌಡರು ತಿಳಿಸಿದರು.

Facebook Comments

comments