Connect with us

    FILM

    ಖ್ಯಾತ ತಮಿಳು ನಟ ವಿವೇಕ್ ಗೆ ಹೃದಯಾಘಾತ – ಆಸ್ಪತ್ರೆಗೆ ದಾಖಲು

    ಚೆನ್ನೈ ಎಪ್ರಿಲ್ 16: ಖ್ಯಾತ ತಮಿಳು ನಟ ವಿವೇಕ್ ಅವರಿಗೆ ಹೃದಯಾಘಾತವಾದ ಹಿನ್ನಲೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾಧ್ಯಮಗಳ ವರದಿ ಅನುಸಾರ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

    ನಿನ್ನೆ ಗುರುವಾರವಷ್ಟೇ ವಿವೇಕ್ ಅವರು ಕೊರೋನಾವೈರಸ್ ಲಸಿಕೆ ಪಡೆದಿದ್ದರು.. ಲಸಿಕೆ ಪಡೆದ ನಂತರ, ವಿವೇಕ್, ಅರ್ಹರಾದ ಜನರು, ಕೋವಿಡ್ 19 ಲಸಿಕೆಗಳನ್ನು ಪಡೆಯುವಂತೆ ಮನವಿ ಸಹ ಮಾಡಿದ್ದರು. ಸಾಂಕ್ರಾಮಿಕ ರೋಗದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕಟ್ಟುನಿಟ್ಟಾದ ಸಾಮಾಜಿಕ ಅಂತರ ಅನುಸರಿಸಬೇಕೆಂದು ಅವರು ಜನರಿಗೆ ಕರೆ ನೀಡಿದ್ದರು.

    ಇಂದು ಮುಂಜಾನೆ ಅವರಿಗೆ ಹೃದಯಾಘಾತವಾಗಿತದ್ದು ಅವರನ್ನು ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ವಿವೇಕ್ ಪ್ರಸ್ತುತ ತೀವ್ರ ನಿಗಾ ಘಟಕ (ಐಸಿಯು) ದಲ್ಲಿದ್ದಾರೆ ಅಲ್ಲಿ ಹೃದ್ರೋಗ ತಜ್ಞರ ತಂಡವು ಅವರನ್ನು ನಿರಂತರವಾಗಿ ಗಮನಿಸುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply