Connect with us

    KARNATAKA

    ಸಿಎಂ ಯಡಿಯೂರಪ್ಪಗೆ ಎರಡನೇ ಬಾರಿ ಕೊರೋನಾ ಪಾಸಿಟಿವ್

    ಬೆಂಗಳೂರು ಎಪ್ರಿಲ್ 16: ಬೆಳಗಾವಿ ಚುನಾವಣೆ ಪ್ರಚಾರ ಮುಗಿಸಿದ ಬೆನ್ನಲ್ಲೆ ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ಸೊಂಕು ತಗುಲಿದೆ. ಕಳೆದೆರಡು ದಿನಗಳಿಂದ ಜ್ವರ, ಸುಸ್ತಿನಿಂದ ಬಳಲುತ್ತಿದ್ದ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಿ ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ.


    ಇಂದು ಮಧ್ಯಾಹ್ನ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ತಪಾಸಣೆಗೆ ಹಾಜರಾಗಿದ್ದರು. ಅಲ್ಲಿ ನಿಗದಿಯಂತೆ ಅವರಿಗೆ ಕೊರೋನಾ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಪಾಸಿಟಿವ್ ಬಂದಿದ್ದು ಇದೀಗ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
    ಇತ್ತೀಚೆಗೆ ಕೊರೊನಾ ಲಸಿಕೆಯನ್ನು ಮುಖ್ಯಮಂತ್ರಿ ಪಡೆದಿದ್ದರು. ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ಬರುತ್ತಿರುವುದು ಇದು ಎರಡನೇ ಸಲ. ಕಳೆದ ವರ್ಷ ಕೂಡ ಕೊರೋನಾ ಬಂದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply