LATEST NEWS
ಏಕಕಾಲದಲ್ಲಿ ನಾಲ್ಕು ಶತ್ರುಗಳ ವಿರುದ್ದ ಯುದ್ದದಲ್ಲಿ ಪುಟ್ಟ ರಾಷ್ಟ್ರ ಇಸ್ರೇಲ್
ಇಸ್ರೇಲ್ ಸೆಪ್ಟೆಂಬರ್ 30: ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಯೆಮೆನ್ ನ ಹೌತಿ ಉಗ್ರರ ವಿರುದ್ದ ಇದೀಗ ಇಸ್ರೇಲ್ ಸೇನೆ ಮುಗಿ ಬಿದ್ದಿದ್ದು, ಸುಮಾರು 1800 ಕಿಲೋ ಮೀಟರ್ ದೂರದ ಯೆಮೆನ್ ನ ಹೌತಿ ಉಗ್ರರ ನೆಲೆಗಳ ಮಾರಕ ದಾಳಿ ನಡೆಸಿದೆ. ಇದರೊಂದಿಗೆ ಇಸ್ರೇಲ್ ಎಂಬ ಪುಟ್ಟ ದೇಶ ಏಕಕಾಲದಲ್ಲಿ ನಾಲ್ಕು ಯುದ್ದದಲ್ಲಿ ತೊಡಗಿಕೊಂಡಿದೆ. ಗಾಜಾದಲ್ಲಿ ಹಮಾಸ್, ಲೆಬೆನಾನ್ ನಲ್ಲಿ ಹೆಜ್ಬುಲ್ಲಾ ಮತ್ತು ಸಿರಿಯಾ ಸೇನೆಯೊಂದಿಗೆ ಯುದ್ಧ ನಡೆಸುತ್ತಿರುವ ಇಸ್ರೇಲ್ ಸೇನೆ ಇದೀಗ ಯೆಮೆನ್ ಮೇಲೂ ವಾಯುದಾಳಿ ಆರಂಭಿಸಿದೆ.
ಲೆಬನಾನ್ ನಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸೇರಿದಂತೆ 20 ಕ್ಕೂ ಹೆಚ್ಚು ಹಿಜ್ಬುಲ್ಲಾ ಸದಸ್ಯರನ್ನು ಕೊಂದ ಎರಡು ದಿನಗಳ ನಂತರ, ಇಸ್ರೇಲಿ ಮಿಲಿಟರಿ ಯೆಮೆನ್‌ನಲ್ಲಿ ಫೈಟರ್ ಜೆಟ್‌ಗಳನ್ನು ಬಳಸಿಕೊಂಡು ಹಲವಾರು ಹೌತಿ ಬಂಡುಕೋರರ ಗುರಿಗಳನ್ನು ಹೊಡೆದಿದೆ. ಯೆಮೆನ್‌ನ ರಾಸ್ ಇಸಾ ಮತ್ತು ಹುದೈದಾ ಪ್ರದೇಶಗಳಲ್ಲಿ ದೇಶದಿಂದ 1,800 ಕಿಮೀ ದೂರದಲ್ಲಿರುವ ಮಿಲಿಟರಿ ಹೌತಿ ಗುರಿಗಳ ಮೇಲೆ ದಾಳಿ ಮಾಡಲು ಇಸ್ರೇಲ್ ವಾಯುಪಡೆಯು ಡಜನ್ಗಟ್ಟಲೆ ವಿಮಾನಗಳನ್ನು ನಿಯೋಜಿಸಿತು. ಇಸ್ರೇಲ್ ವಿರುದ್ಧ ಇತ್ತೀಚಿನ ಹೌತಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳನ್ನು ನಡೆಸಲಾಯಿತು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ನಿರ್ದಿಷ್ಟವಾಗಿ ವಿದ್ಯುತ್ ಸ್ಥಾವರಗಳು ಮತ್ತು ಬಂದರು ಸೇರಿದಂತೆ ಹೌತಿ ಬಂಡುಕೋರರ-ನಿಯಂತ್ರಿತ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ತೀವ್ರ ದಾಳಿ ನಡೆಸಿದೆ.
ಏತನ್ಮಧ್ಯೆ, ಹೈಫಾ ಮತ್ತು ಉತ್ತರ ಇಸ್ರೇಲ್ ಅನ್ನು ಗುರಿಯಾಗಿಟ್ಟುಕೊಂಡು ಹಿಜ್ಬುಲ್ಲಾ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ಇನ್ನು ಪುಟ್ಟ ರಾಷ್ಟ್ರ ಇಸ್ರೇಲ್ ಇದೀಗ ಏಕಕಾಲದಲ್ಲಿ ತನ್ನ ನಾಲ್ಕು ಶತೃಗಳ ವಿರುದ್ಧ ಯುದ್ಧ ನಡೆಸುತ್ತಿದೆ. ಗಾಜಾದಲ್ಲಿ ಹಮಾಸ್, ಲೆಬೆನಾನ್ ನಲ್ಲಿ ಹೆಜ್ಬುಲ್ಲಾ ಮತ್ತು ಸಿರಿಯಾ ಸೇನೆಯೊಂದಿಗೆ ಯುದ್ಧ ನಡೆಸುತ್ತಿದ್ದ ಇಸ್ರೇಲ್ ಇದೀಗ ಯೆಮೆನ್ ಹೌತಿ ಬಂಡುಕೋರರ ವಿರುದ್ಧವೂ ಯುದ್ಧ ಸಾರಿದೆ. ಅಲ್ಲದೆ ಈ ಬಗ್ಗೆ ಮಾತನಾಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಯೋತ್ಪಾದನೆಯನ್ನು ನಿರ್ನಾಮ ಮಾಡುವ ಶಪಥಗೈದಿದ್ದಾರೆ.