Connect with us

    FILM

    ಬಿಗ್ ಬಾಸ್ ಸೀಸನ್ 11 ರಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಬ್ಬರು ಸ್ಪರ್ಧಿಗಳು

    ಮಂಗಳೂರು ಸೆಪ್ಟೆಂಬರ್ 30: ಈ ಬಾರಿ ಬಿಗ್ ಬಾಸ್ ಸೀಸನ್ 11ರಲ್ಲಿ ಕರಾವಳಿಯ ಸ್ಪರ್ದಿಗಳು ಹೆಚ್ಚಾಗಿ ಇದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಇಬ್ಬರು ಸ್ಪರ್ಧಿಗಳು ಹಾಗೂ ಉಡುಪಿ ಜಿಲ್ಲೆಯ ಒಬ್ಬರು ಈ ಬಾರಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕಲರ್ಸ್ ಕನ್ನಡದಲ್ಲಿ ಈಗಾಗಲೇ ಪ್ರಾರಂಭವಾಗಿರುವ ಬಿಗ್ ಬಾಸ್ ಗೆ ಈ ಬಾರಿ ಒಟ್ಟೂ 17 ಮಂದಿ ದೊಡ್ಮನೆ ಸೇರಿದ್ದಾರೆ. ಈ ಬಾರಿ ನರಕ-ಸ್ವರ್ಗ ಕಾನ್ಸೆಪ್ಟ್​ನಲ್ಲಿ ಬಿಗ್ ಬಾಸ್ ಮೂಡಿ ಬಂದಿದೆ. 17 ಮಂದಿಯಲ್ಲಿ ಈ ಬಾರಿ ಕರಾವಳಿಯ ಮೂವರು ಇದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಿಂದಲೇ ಇಬ್ಬರು ಸ್ಪರ್ಧಿಯಾಗಿ ಈ ಬಾರಿ ಇದ್ದಾರೆ.


    ಬಂಟ್ವಾಳದ ಧನರಾಜ್ ಆಚಾರ್ಯ ಹಾಗೂ ಮಂಗಳೂರಿನ ಮೋಕ್ಷಿತಾ ಪೈ ಈ ಬಾರಿ ಬಿಗ್ ಬಾಸ್ ನಲ್ಲಿದ್ದಾರೆ. ಇನ್ನು ಉಡುಪಿ ಜಿಲ್ಲೆಯಿಂದ ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿ ಚೈತ್ರಾ ಕುಂದಾಪುರ ಇದ್ದಾರೆ. ಧನರಾಜ್ ಆಚಾರ್ಯ ಬಂಟ್ವಾಳದವರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಖ್ಯಾತಿ ಪಡೆದಿದ್ದರು , ಬಳಿಕ ಗಿಚ್ಚಗಿಲಿಗಿಲಿ ಶೋ ನಲ್ಲೂ ಮಿಂಚಿರುವ ಅವರು ಇದೀಗ ಬಿಗ್ ಬಾಸ್ ಗೆ ಎಂಟ್ರಿಕೊಟ್ಟಿದ್ದಾರೆ.

    ಇನ್ನೂ ಮೋಕ್ಷಿತಾ ಪೈ ಮಂಗಳೂರಿನವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. ತಂದೆ ನಾಗೇಶ್ ಪೈ ಹಾಗೂ ತಾಯಿ ಗೋದಾವರಿ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಇವರು, ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿದ್ದಾರೆ. ಇವರಿಗೆ ಆಟಿಸಂನಿಂದ ಬಳಲುತ್ತಿರುವ ಸಹೋದರನಿದ್ದು, ಅವರನ್ನು ಮಗುವಿನಂತೆ ಆರೈಕೆ ಮಾಡುತ್ತಾರೆ. ಇವರ ನಟನೆಯ ಮೊದಲ ಸೀರಿಯಲ್ ಪಾರು. ಈ ಧಾರಾವಾಹಿ ಮೂಲಕ ಕರ್ನಾಟದ ಮನೆಮತಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸೀರಿಯಲ್‌ಗಳನ್ನು ನಟಿಸಿದ್ದಾರೆ

    ಇನ್ನು ಉಡುಪಿ ಜಿಲ್ಲೆಯ ಚೈತ್ರಾ ಕುಂದಾಪುರ, ಇಡೀ ಕರ್ನಾಟಕಕ್ಕೆ ಹಿಂದೂ ಪೈರ್ ಬ್ರ್ಯಾಂಡ್ ಹೆಸರಿನಲ್ಲಿ ಪರಿಚಯವಾಗಿರುವ ಇವರು , ಇದೀಗ ವಂಚನೆ ಪ್ರಕರಣದಲ್ಲೂ ಜೈಲಿಗೆ ಹೋಗಿ ಬಂದಿದ್ದಾರೆ. ಉಡುಪಿ ಜಿಲ್ಲೆಯ ಕುಂದಾರಪುರ ತೆಕ್ಕಟ್ಟೆಯಲ್ಲಿ ಪಿಯುಸಿಯವರೆಗೆ ವ್ಯಾಸಂಗ ಮಾಡಿದ ಇವರು, ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪದವೀಧರೆಯಾದ ಇವರು, ಉಡುಪಿಯ ಸ್ಪಂದನಾ ಹಾಗೂ ಮುಕ್ತ ನ್ಯೂಸ್ ಎಂಬ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದ್ದರು.

    ಈ ಬಾರಿ ಬಿಗ್ ಬಾಸ್ ನಲ್ಲಿ ಕರಾವಳಿಯ ಮೂವರು ಇದ್ದು, ಬಿಗ್ ಬಾಸ್ ಸೀಸನ್ ಬಾರಿ ಕುತೂಹಲಕ್ಕೆ ಕಾರಣವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply