Connect with us

    LATEST NEWS

    ಇರಾನ್ ಮೇಲೆ ಮುಗಿಬಿದ್ದ ಇಸ್ರೇಲ್ – ಇರಾನ್ ಪರಮಾಣು ಸ್ಥಾವರ ಸಮೀಪವೇ ದಾಳಿ ನಡೆಸಿದ ತಿರುಗೇಟು ನೀಡಿದ ಇಸ್ರೇಲ್

    ಇಸ್ರೇಲ್ ಎಪ್ರಿಲ್ 19: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದ ಭೀತಿ ಕೊನೆಯ ಹಂತಕ್ಕೆ ಬಂದಿದೆ ಎನ್ನುವಷ್ಟರಲ್ಲೇ ಇದೀಗ ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ತನ್ನ ಸೇಡನ್ನು ತೀರಿಸಿಕೊಂಡಿದೆ.


    ಕಳೆದ ಭಾನುವಾರ ಮುಂಜಾನೆ ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಬಳಿಕ ಇಸ್ರೇಲ್ ತಿರುಗೇಟು ನೀಡಲಿದೆ ಎಂದು ಹೇಳಲಾಗಿತ್ತು, ಆದರೆ ಸೈಲೆಂಟ್ ಇದ್ದ ಇಸ್ರೇಲ್ ಇದೀಗ ಸಡನ್ ಆಗಿ ಇರಾನ್ ಮೇಲೆ ದಾಳಿ ನಡೆಸಿದೆ. ಇದೇ ವೇಳೆ ಇರಾನ್, ಸಿರಿಯಾ ಮತ್ತು ಇರಾಕ್‌ನಲ್ಲಿ ಸ್ಫೋಟದ ಸದ್ದು ಕೇಳಿ ಬಂದಿದೆ. ಜೆರುಸಲೆಮ್ ಪೋಸ್ಟ್ ವರದಿಯ ಪ್ರಕಾರ, ಶುಕ್ರವಾರ ಬೆಳಿಗ್ಗೆ ಮಧ್ಯ ಇರಾನ್‌ನ ಇಸ್ಫಹಾನ್, ದಕ್ಷಿಣ ಸಿರಿಯಾದ ಅಸ್-ಸುವೈದಾ ಗವರ್ನರೇಟ್ ಮತ್ತು ಬಾಗ್ದಾದ್ ಪ್ರದೇಶದಲ್ಲಿ ಮತ್ತು ಇರಾಕ್‌ನ ಬಾಬಿಲ್ ಗವರ್ನರೇಟ್‌ನಲ್ಲಿ ಸ್ಫೋಟದ ಸದ್ದು ಕೇಳಿಸಿತು.

    ಇದೀಗ ಇರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿರುವ ಸುದ್ದಿ ಹೊರಬೀಳುತ್ತಿದೆ. ಇಸ್ರೇಲಿ ಕ್ಷಿಪಣಿಗಳು ಇರಾನ್‌ನ ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳುತ್ತಿವೆ.

    Share Information
    Advertisement
    Click to comment

    You must be logged in to post a comment Login

    Leave a Reply