LATEST NEWS
ಪಾಕ್ ಯುವತಿ ವರಿಸಿದ್ದ ಕೇರಳದ ಉಗ್ರ- ಮದುವೆ ದಿನವೇ ಬಾಂಬ್ ದಾಳಿಯಲ್ಲಿ ಸಾವು

ಕೇರಳ: ಉಗ್ರ ಸಂಘಟನೆ ಐಸಿಸ್ ನ ಅಫ್ಘಾನಿಸ್ತಾನ ಮೂಲದ ಶಾಖೆ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾವಿನೆನ್ಸ್‍ಗೆ ಸೇರಿದ ಕೇರಳ ಮೂಲದ ಇಂಜಿನಿಯರಿಂಗ್ ಪದವೀಧರ ಮದುವೆಯಾದ ದಿನವೇ ಬಾಂಬ್ ದಾಳಿಯಲ್ಲಿ ಹತ್ಯೆಯಾಗಿದ್ದಾನೆ.
ಮೃತನನ್ನು ನಜೀಬ್ ಅಲ್ ಹಿಂದಿ ಎಂದು ಗುರುತಿಸಲಾಗಿದೆ. ಈತ ಕೇರಳ ಮೂಲದವನಾಗಿದ್ದಾನೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ. ಪಾಕಿಸ್ತಾನ ಮಹಿಳೆಯನ್ನು ಮದುವೆಯಾದ ಕೆಲವೇ ಗಂಟೆಯಲ್ಲಿ ನಜೀಬ್ ಸಾವನ್ನಪ್ಪಿದ್ದಾನೆ.
ಇಸ್ಲಾಮಿಕ್ ಸ್ಟೇಟ್ ಲೇಖನ ಪ್ರಕಾರ, ನಜೀಬ್ ಸ್ವಯಂಪ್ರೇರಿತನಾಗಿ ಭಾರತದಿಂದ ಅಫ್ಘಾನಿಸ್ತಾನದ ಖೊರಾಸನ್ ಪ್ರದೇಶಕ್ಕೆ ಬಂದಿದ್ದನು. ಉಗ್ರರನ್ನು ಭೇಟಿ ಮಾಡಿ, ಅಲ್ಲೇ ಉಳಿದಿದ್ದ.

ನಜೀಬ್‍ಗೆ ಮದುವೆಯಾಗುವಂತೆ ಆತನ ಸ್ನೇಹಿತರು ಒತ್ತಾಯಿಸಿದ್ದರು. ಹೀಗಾಗಿ ಪಾಕಿಸ್ತಾನಿ ಕುಟುಂಬದ ಯುವತಿಯೊಂದಿಗೆ ಮದುವೆಯಾಗಿದ್ದನು. ಅವರೂ ಕೂಡ ಐಸ್‍ಕೆಪಿಯೊಂದಿಗೆ ಸಂಬಂಧ ಹೊಂದಿದ್ದರು. ನಜೀಬ್ ಹಾಗೂ ಆ ಯುವತಿಯ ಮದುವೆಯ ದಿನವೇ ಶತ್ರುಗಳು ಅವರ ಪ್ರದೇಶದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಆತ್ಮಹತ್ಯಾ ದಾಳಿಯ ಬಗ್ಗೆ ನಜೀಬ್ ಮಾತನಾಡಿದ್ದ. ಯುವತಿಯ ತಂದೆಯ ಒತ್ತಾಯದ ಮೇರೆಗೆ ಮದುವೆಯಾದ ನಜೀಬ್ ನಂತರ ಶತ್ರುಗಳೊಂದಿಗೆ ಹೋರಾಡಲು ತೆರಳಿ, ಅಲ್ಲಿ ಮೃತಪಟ್ಟ ಎಂದು ತಿಳಿಸಲಾಗಿದೆ.