Connect with us

LATEST NEWS

ಮಂಗಳೂರು – ಬೈಕ್ ವ್ಹೀಲಿಂಗ್ ಸ್ಟಂಟ್ ಮಾಡಿ ವಿಡಿಯೋ ಅಪ್ಲೋಡ್ ನಾಲ್ವರ ವಿರುದ್ದ ದೂರು ದಾಖಲು

ಮಂಗಳೂರು: ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ವ್ಹೀಲಿಂಗ್ ಸ್ಟಂಟ್ ಮಾಡಿ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ನಾಲ್ವರು ಯುವಕರ ವಿರುದ್ದ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಇಲ್ಯಾಸ್ ಝಿಯಾನ್, ಕಿಶನ್ ಶೆಟ್ಟಿ,ತೌಸೀಫ್,ಆನೀಝ್ ಎಂಬವರ ವಿರುದ್ದ ದೂರು ದಾಖಲಾಗಿದೆ. ಈ ಯುವಕರು ಅಪಾಯಕಾರಿಯಾಗಿ ಬೈಕ್ ಸವಾರಿ ಮಾಡಿ ವ್ಹೀಲಿಂಗ್ ಸ್ಟಂಟ್ ಮಾಡುತ್ತಾ ಅಡ್ಡಾದಿಡ್ಡಿಯಾಗಿ ಇತರ ವಾಹನಗಳು, ಪಾದಚಾರಿಗಳಿಗೆ ಅಪಾಯ ಉಂಟಾಗುವ ರೀತಿಯಲ್ಲಿ ಸವಾರಿ ಮಾಡಿದ್ದರು, ಅಲ್ಲದೆ ಈ ಸ್ಟಂಟ್ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ವೀಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು.

Advertisement
Click to comment

You must be logged in to post a comment Login

Leave a Reply