LATEST NEWS
ಈ ತರಹದ ದುರಂಹಕಾರಿ ಸಿಎಂ ನಾನು ನೋಡಿಲ್ಲ – ಸುನಿಲ್ ಕುಮಾರ್
ಈ ತರಹದ ದುರಂಹಕಾರಿ ಸಿಎಂ ನಾನು ನೋಡಿಲ್ಲ – ಸುನಿಲ್ ಕುಮಾರ್
ಉಡುಪಿ ಮಾರ್ಚ್ 6: ಕರಾವಳಿಯಲ್ಲಿ ಕೇಸರಿ ಶಾಲು ಧರಿಸಿ ಮನೆ ಬಿಟ್ಟ ಯುವಕರು ಮನೆಗೆ ಬರುವುದು ಗ್ಯಾರಂಟಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಕಾಪುವಿನಲ್ಲಿ ನಡೆದ ಜನ ಸುರಕ್ಷಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು ಕರಾವಳಿಯಲ್ಲಿ ಬದುಕಿನ ಪ್ರಶ್ನೆ ನಿರ್ಮಾಣವಾಗಿದೆ. ಬೆಳಿಗ್ಗೆ ಮನೆ ಬಿಟ್ಟ ಯುವಕರು ವಾಪಾಸ್ ಮನೆಗೆ ಬರುವುದು ಗ್ಯಾರಂಟಿ ಇಲ್ಲದಂತಾಗಿದೆ. ಕರಾವಳಿಯ ಯುವಕರಿಗೆ ರಕ್ಷಣೆ ನೀಡುವ ಗೃಹ ಇಲಾಖೆ ಮೌನವಾಗಿದೆ ಎಂದು ಆರೋಪಿಸಿದರು.
ರಸ್ತೆ, ಕರೆಂಟು, ಸೇತುವೆ ಇಲ್ಲಾಂದ್ರೆ ಬದುಕಬಹುದು ಆದರೆ ಬೆಳಿಗ್ಗೆ ಮನೆಯಿಂದ ಹೊರಟ ಯುವಕರು ಮನೆಗೆ ಬಂದಿಲ್ಲ ಅಂದರೆ ಆತಂಕ ಪಡುವಂತ ಸ್ಥಿತಿ ನಿರ್ಮಾಣವಾಗಿದೆ.
20 ಕಾರ್ಯಕರ್ತರ ಹತ್ಯೆ ರಾಜ್ಯ ಸರ್ಕಾರದ ಒಂದು ಭಾಗವಾಗಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಈ ಹತ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದರು. ಆದರೆ ಕಬೀರ ಹತ್ಯೆ ಆದ್ರೆ ಪೋಸ್ಟ್ ಮಾರ್ಟಂ ಮುಂಚೆ ಪರಿಹಾರ ಘೋಷಿಸ್ತಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಗೋಹತ್ಯೆ ಕಾನೂನು ವಾಪಾಸ್ ತೆಗೆದು, ನಾನೇ ಗೋಮಾಂಸ ತಿನ್ನುತ್ತೇನೆ ಎಂದು ಹೇಳಿಕೆ ನೀಡುತ್ತಾರೆ. ಈ ರೀತಿಯ ಹೇಳಿಕೆಗಳಿಂದ ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ನೋವಾಗುತ್ತೆ ಎಂಬ ಸಾಮಾನ್ಯ ಜ್ಞಾನ ಕೂಡ ಮುಖ್ಯಮಂತ್ರಿಗಳಿಗಿಲ್ಲ ಎಂದು ಹೇಳಿದರು.
ಕಾಪು ನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡ್ತಾ ಇದಾರೆ, ಭಾರತ್ ಮಾತಾಕೀ ಜೈ ಅಂದ್ರೆ ಸಾಕು ಗೋಂಡಾ ಕಾಯ್ದೆ ಹಾಕ್ತಾರೆ ಆದರೆ ತಲವಾರು ಹಿಡ್ಕೊಂಡೋರಿಗೆ ಏನೂ ಮಾಡಲ್ಲ ಎಂದು ಆರೋಪಿಸಿದರು. ಈ ತರಹದ ದುರಂಹಕಾರಿ ಮುಖ್ಯಮಂತ್ರಿಯನ್ನು ನಾನು ಈವರೆಗೆ ನೋಡಿಲ್ಲ ಎಂದು ಹೇಳಿದರು.