Connect with us

  LATEST NEWS

  2016ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟ

  2016ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟ

  ಕರ್ನಾಟಕ ರಾಜ್ಯದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ 2016ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟವಾಗಿದೆ.
  ಕರ್ನಾಟಕ ರಾಜ್ಯದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ಏಕಲವ್ಯ ಪ್ರಶಸ್ತಿಯನ್ನು 1992ನೇ ಸಾಲಿನಿಂದ ಕರ್ನಾಟಕದ ಅಪ್ರತಿಮ ಕ್ರೀಡಾಸಾಧಕರಿಗೆ ನೀಡಿ ಗೌರವಿಸಲಾಗುತ್ತಿದೆ. ಪ್ರತಿ ವರ್ಷ ವಿವಿಧ ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಕ್ರೀಡಾ ಸಾಧಕರಿಗೆ ಏಕಲವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

  2016ರ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳ ಪಟ್ಟಿ

  ಕ್ರ.ಸಂ. ಹೆಸರು ಕ್ರೀಡೆ
  1 ಹರ್ಷಿತ್ ಎಸ್.- ಅಥ್ಲೆಟಿಕ್ಸ್
  2 ರಾಜೇಶ್ ಪ್ರಕಾಶ್ ಉಪ್ಪಾರ್ – ಬ್ಯಾಸ್ಕೆಟ್‍ಬಾಲ್
  3 ಪೂರ್ವಿಷಾ ಎಸ್. ರಾಮ್ – ಬ್ಯಾಡ್ಮಿಂಟನ್
  4 ರೇಣುಕಾ ದಂಡಿನ್ –  ಸೈಕ್ಲಿಂಗ್
  5 ಮಯೂರ್ ಡಿ ಭಾನು –  ಶೂಟಿಂಗ್
  6 ಕಾರ್ತಿಕ್ ಎ – ವಾಲಿಬಾಲ್
  7 ಮಾಳವಿಕ ವಿಶ್ವನಾಥ್ – ಈಜು
  8 ಕೀರ್ತನಾ ಟಿ.ಕೆ – ರೋಯಿಂಗ್
  9 ಅಯ್ಯಪ್ಪ ಎಂ.ಬಿ. – ಹಾಕಿ
  10 ಸುಕೇಶ್ ಹೆಗ್ಡೆ – ಕಬಡ್ಡಿ
  11 ಗುರುರಾಜ  – ಭಾರ ಎತ್ತುವುದು
  12 ಸಂದೀಪ ಬಿ. ಕಾಟೆ –  ಕುಸ್ತಿ
  13 ರೇವತಿ ನಾಯಕ ಎಂ. ವಿಕಲಚೇತನ – ಮಹಿಳಾ ಈಜುಪಟು

  ಏಕಲವ್ಯ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಕ್ರೀಡಾ ಸಾಧಕರಿಗೆ ತಲಾ ರೂ.2.00 ಲಕ್ಷಗಳ ನಗದು ಬಹುಮಾನ, ಸ್ಕ್ರೋಲ್, ಏಕಲವ್ಯನ ಕಂಚಿನ ಪ್ರತಿಮೆಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು.

  ಜೀವಮಾನ ಸಾಧನೆ ಪ್ರಶಸ್ತಿ- 2016

  ಕ್ರೀಡಾ ಕ್ಷೇತ್ರಕ್ಕೆ ಅಪ್ರತಿಮ ಕ್ರೀಡಾಪಟುಗಳನ್ನು ನೀಡಿದ ಕರ್ನಾಟಕದ ತರಬೇತುದಾರರಿಗೆ ಅವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಪ್ರತಿ ವರ್ಷ 2 ಕ್ರೀಡಾ ತರಬೇತುದಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಸಕ್ತ ವರ್ಷ ಇಬ್ಬರು ಸಾಧಕರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

  ಜೀವಮಾನ ಸಾಧನೆ ಪ್ರಶಸ್ತಿ
  ಕ್ರ.ಸಂ. ಹೆಸರು ಕ್ರೀಡೆ
  1 ವಿ.ಆರ್. ಬೀಡು – ಅಥ್ಲೆಟಿಕ್ಸ್
  2 ಎಂ.ಆರ್. ಮೊಹಿತೆ – ಈಜು

  ಜೀವಮಾನ ಸಾಧನೆ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ತರಬೇತುದಾರರಿಗೆ ತಲಾ ರೂ.1.50 ಲಕ್ಷಗಳ ನಗದು ಬಹುಮಾನ, ಸ್ಕ್ರೋಲ್ ಮತ್ತು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.

  ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ- 2016

  ಕರ್ನಾಟಕ ರಾಜ್ಯದ ಗ್ರಾಮೀಣ ಕ್ರೀಡೆಗಳಿಗೆ ಮತ್ತು ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು 2014-15ನೇ ಸಾಲಿನಲ್ಲಿ ಹೊಸ ಯೋಜನೆಯಾಗಿ ಅನುಷ್ಟಾನಕ್ಕೆ ತರಲಾಗಿದೆ. ಗ್ರಾಮೀಣ ದೇಸೀ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಕ್ರೀಡಾಪಟುಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
  2016ರ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳ ಪಟ್ಟಿ

  ಕ್ರ.ಸಂ ಹೆಸರು ಕ್ರೀಡೆ
  1 ಸೈಯದ್‍ಫತೇಶಾವಲಿ ಹೆಚ್. ಬೇಪಾರಿ ಆಟ್ಯಾ-ಪಾಟ್ಯಾ
  2 ಯಶಸ್ವಿನಿ ಕೆ.ಜಿ ಬಾಲ್ – ಬ್ಯಾಡ್ಮಿಂಟನ್
  3 ಶೇಖರ್ ವಾಲಿ – ಗುಂಡು ಎತ್ತುವುದು
  4 ಯುವರಾಜ್ ಜೈನ್ – ಕಂಬಳ
  5 ಮುನ್ನೀರ್ ಭಾಷಾ – ಖೋ-ಖೋ
  6 ಸುಗುಣಸಾಗರ್ ಹೆಚ್ ವಡ್ರಾಳೆ – ಮಲ್ಲಕಂಬ
  7 ಸಬಿಯ ಎಸ್ – ಥ್ರೋಬಾಲ್
  8 ಆತ್ಮಶ್ರೀ ಹೆಚ್.ಎಸ್ – ಕುಸ್ತಿ
  9 ಧನುಶ್ ಬಾಬು – ರೋಲರ್ ಸ್ಕೇಟಿಂಗ್

  ಗ್ರಾಮೀಣ ಕ್ರೀಡಾ ರತ್ನ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಕ್ರೀಡಾ ಸಾಧಕರಿಗೆ ತಲಾ ರೂ.1.00 ಲಕ್ಷಗಳ ನಗದು ಬಹುಮಾನ, ಸ್ಕ್ರೋಲ್ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.

  ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ -2017-18

  ಕ್ರೀಡೆಗಳ ಅಭಿವೃದ್ದಿ ಮತ್ತು ಕ್ರೀಡಾಪಟುಗಳ ಉನ್ನತ ಸಾಧನೆಯಲ್ಲಿ ಕ್ರೀಡಾ ಪ್ರವರ್ತಕರ ಪಾತ್ರ ಮಹತ್ವದ್ದಾಗಿದೆ. ಅಂತಹ ಕ್ರೀಡಾ ಪ್ರವರ್ತಕರನ್ನು ಗುರುತಿಸಿ ಪ್ರೋತ್ಸಾಹಿಸಲು 2017-18ನೇ ಸಾಲಿನಿಂದ ‘ಕರ್ನಾಟಕ ಕ್ರೀಡಾ ಪೋಷಕ’ ಪ್ರಶಸ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

  2017-18ನೇ ಸಾಲಿಗೆ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಕ್ರೀಡಾ
  ಪ್ರವರ್ತಕರ ಪಟ್ಟಿ

  1 ಬ್ರಹ್ಮಾವರ ಸ್ಪೋಟ್ರ್ಸ ಕ್ಲಬ್, ಬ್ರಹ್ಮಾವರ ಉಡುಪಿ
  2 ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ (ರಿ) ಮಿಯ್ಯಾರ್ ಉಡುಪಿ
  3 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ ದಕ್ಷಿಣ ಕನ್ನಡ
  4 ಜೈನ್ ವಿಶ್ವವಿದ್ಯಾಲಯ, ಬೆಂಗಳೂರು ಬೆಂಗಳೂರು
  5 ಜೆ.ಎಸ್.ಡಬ್ಲ್ಯೂ, ಬಳ್ಳಾರಿ ಬಳ್ಳಾರಿ
  6 ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ(ರಿ) ಕ್ಯಾತನಹಳ್ಳಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ. ಮಂಡ್ಯ
  7 ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರ ನಿ. ಚಂದರಗಿ ಬೆಳಗಾವಿ
  8 ಕಂಠೀರವ ಕೇಸರಿ ರತನ್ ಮಠಪತಿ ಸ್ಪೋಟ್ರ್ಸ ಅಂಡ್ ಎಜ್ಯುಕೇಷನ್ ಸೊಸೈಟಿ, ಹುನ್ನೂರ, ತಾಲ್ಲೂಕು ಜಮಖಂಡಿ, ಜಿಲ್ಲಾ ಬಾಗಲಕೋಟ ಬಾಗಲಕೋಟ
  9 ಕೃಷ್ಣಾ ತೀರಾ ರೈತ ಸಂಘ (ರಿ), ಜಮಖಂಡಿ, ಜಿಲ್ಲಾ ಬಾಗಲಕೋಟ ಬಾಗಲಕೋಟ
  10 ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ), ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾಲ್ಲೂಕು ಮಂಡ್ಯ. ಮಂಡ್ಯ

  ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಕ್ರೀಡಾ ಪ್ರವರ್ತಕರಿಗೆ ತಲಾ ರೂ.5.00 ಲಕ್ಷಗಳ ನಗದು ಬಹುಮಾನ, ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

  Share Information
  Advertisement
  Click to comment

  You must be logged in to post a comment Login

  Leave a Reply